
ಬೆಂಗಳೂರು: ದೇಶದ ಜಿಡಿಪಿಯ ಪಾಲಿನಲ್ಲಿ ಕರ್ನಾಟಕವು ಅಗ್ರ ಸ್ಥಾನ ಹೊಂದುವ ಮೂಲಕ ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಹೊರ ಹೊಮ್ಮಿವೆ. ಗ್ಯಾರಂಟಿ ಯೋಜನೆಗಳು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ತರುತ್ತಿರುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ ಎಂದು ರಾಜ್ಯ ಕಾಂಗ್ರೆಸ್ ತಿಳಿಸಿದೆ.
ಮಲ್ಲವ್ವ ಮೇಟಿ ಎಂಬ ಮಹಾತಾಯಿಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಯುವ ಪೀಳಿಗೆಯ ಅನುಕೂಲಕ್ಕಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿ ನಾಡಿಗೆ ಮಾದರಿಯಾಗಿದ್ದಾರೆ. ಮಲ್ಲವ್ವ ಮೇಟಿಯವರ ಈ ಸಾಮಾಜಿಕ ಕಳಕಳಿಗೆ ಕಾಂಗ್ರೆಸ್ ಪಕ್ಷವು ಅಭಿನಂದಿಸುತ್ತದೆ.
ಬಡವರ ಸಣ್ಣ ಸಣ್ಣ ಕನಸುಗಳನ್ನು ಈಡೇರಿಸುತ್ತಿರುವ ಗೃಹಲಕ್ಷ್ಮಿ ಹಣದಲ್ಲಿ ಮಗನಿಗೆ ಬೈಕ್ ಕೊಡಿಸಿದ್ದಾರೆ, ಟಿವಿ, ಫ್ರಿಡ್ಜ್ ಖರೀದಿಸಿದ್ದಾರೆ, ಮಗಳ ಮದುವೆಗೆ ಒಡವೆ ಮಾಡಿಸಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕ್ರಾಂತಿ ಸೃಷ್ಟಿಸುತ್ತಿರುವುದು ನಿಸ್ಸಂಶಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸಂತಸ ವ್ಯಕ್ತಪಡಿಸಿದೆ.