alex Certify ʻಗೃಹಲಕ್ಷ್ಮಿʼ ಯೋಜನೆ ಸಮಸ್ಯೆ ನಿವಾರಣೆಗೆ ಗ್ರಾಮ ಮಟ್ಟದಲ್ಲಿ ʻಕ್ಯಾಂಪ್ʼ ಆಯೋಜನೆ : ಈ ದಾಖಲೆಗಳನ್ನು ಇಟ್ಟುಕೊಳ್ಳಿ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻಗೃಹಲಕ್ಷ್ಮಿʼ ಯೋಜನೆ ಸಮಸ್ಯೆ ನಿವಾರಣೆಗೆ ಗ್ರಾಮ ಮಟ್ಟದಲ್ಲಿ ʻಕ್ಯಾಂಪ್ʼ ಆಯೋಜನೆ : ಈ ದಾಖಲೆಗಳನ್ನು ಇಟ್ಟುಕೊಳ್ಳಿ!

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಡಿ. 27ರ ಇಂದಿನಿಂದ 29 ರವರೆಗೆ ಕ್ಯ್ಯಾಂಪ್‍ಗಳನ್ನು ಆಯೋಜಿಸಲಾಗಿದೆ.

ಕ್ಯಾಂಪ್‍ಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ, ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ,. ಇ-ಕೆವೈಸಿ ನವೀಕರಣ, ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲನೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹಾರ ಒದಗಿಸಲಾಗುತ್ತದೆ.

ಫಲಾನುಭವಿಗಳು ನಿಗಧಿತ ದಿನಗಳಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳಬಹುದು.

ಸಮಸ್ಯೆಗಳಿಗೆ ಪರಿಹಾರ

ಆಧಾರ್‌ ಜೋಡಣೆ

ಬ್ಯಾಂಕ್‌ ಸಮಸ್ಯೆ

ಇ-ಕೆವೈಸಿ

ಹೊಸ ಬ್ಯಾಂಕ್‌ ಖಾತೆ ಆರಂಭ

ಜೊತೆಗೆ ತರಬೇಕಾದ ದಾಖಲೆಗಳು

ತಮ್ಮ ಆಧಾರ್‌ ಕಾರ್ಡ್‌

ಪತಿಯ ಆಧಾರ್‌ ಕಾರ್ಡ್‌

ಪಡಿತರ ಚೀಟಿ

ಬ್ಯಾಂಕ್‌ ಪಾಸ್‌ ಪುಸ್ತಕ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...