alex Certify ಜೈಲು ಕೈದಿಗಳ ಆಟಕ್ಕೆ ಬೀಳಲಿದೆ ಬ್ರೇಕ್: ಕಾರಾಗೃಹದಲ್ಲಿ ‘THCB’ ಅಳವಡಿಕೆಗೆ ಗ್ರೀನ್ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲು ಕೈದಿಗಳ ಆಟಕ್ಕೆ ಬೀಳಲಿದೆ ಬ್ರೇಕ್: ಕಾರಾಗೃಹದಲ್ಲಿ ‘THCB’ ಅಳವಡಿಕೆಗೆ ಗ್ರೀನ್ ಸಿಗ್ನಲ್

ಬೆಂಗಳೂರು : ಜೈಲಿನಲ್ಲಿ ಕುಳಿತುಕೊಂಡೇ ಡೀಲ್ (deal) ಕುದುರಿಸುವ ಕೈದಿಗಳ ಕಳ್ಳಾಟಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಯೆಸ್, ಕಾರಾಗೃಹಗಳಲ್ಲಿ ಅಳವಡಿಕೆಗೆ THCB ಅಳವಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.

ಏನಿದು THCB..?

(THCB) Tower for Harmonious Call Blocking System ಅಂದರೆ ಇದರ ಮೂಲಕ ಯಾವುದೇ ಮೊಬೈಲ್ ಕರೆಗಳು ಜೈಲಿನ ಆವರಣದಿಂದ ಹೊರ ಹೋಗದಂತೆ ಟವರ್ ಸಿಗ್ನಲ್ ಗಳು ಕೆಲಸ ಮಾಡುತ್ತದೆ.

ಕರೆಗಳು ಹೊರಗೆ ಹೋಗದಂತೆ THCB ನಿರ್ಬಂಧಿಸುತ್ತದೆಯಂತೆ, ವಿವಿಧ ಮೊಬೈಲ್ ನೆಟ್ ವರ್ಕ್ ಗಳ ಕಂಪನಿಗಳ ಆಂಟೇನಾಗಳನ್ನು ಅಳವಡಿಸಿ ಇದರ ಮೂಲಕ ಮೊಬೈಲ್ ಸಂಪರ್ಕ ಸಿಗದಂತೆ ನಿರ್ಬಂಧ ಹೇರಲಾಗುತ್ತದೆ. ಸದ್ಯ, ಪರಪ್ಪನ ಅಗ್ರಹಾರದಲ್ಲಿ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಈ ಸಿಸ್ಟಮ್ ಸ್ಥಾಪಿಸಲಾಗಿದೆ. ಕೈದಿಗಳು ಜೈಲಿನಿಂದಲೇ ಕುಳಿತುಕೊಂಡು ಕೊಲೆಗೆ ಡೀಲ್ ಕುದುರಿಸುವುದು, ಬೆದರಿಕೆಯೊಡ್ಡುವುದನ್ನು ಮಾಡುತ್ತಿದ್ದರು. ಇಂತಹ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು THCB ಅಳವಡಿಕೆಗೆ ನಿರ್ಧರಿಸಲಾಗಿದೆ. ಸದ್ಯ, ಪರಪ್ಪನ ಅಗ್ರಹಾರದಲ್ಲಿ THCB ಅಳವಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...