alex Certify SHOCKING: ವರದಕ್ಷಿಣೆಗಾಗಿ ಗಂಡನ ಮನೆಯವರಿಂದ ಹಲ್ಲೆಗೊಳಗಾದ ಮಹಿಳೆಗೆ ಗರ್ಭಪಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವರದಕ್ಷಿಣೆಗಾಗಿ ಗಂಡನ ಮನೆಯವರಿಂದ ಹಲ್ಲೆಗೊಳಗಾದ ಮಹಿಳೆಗೆ ಗರ್ಭಪಾತ

ಗ್ರೇಟರ್ ನೋಯ್ಡಾ: ವರದಕ್ಷಿಣೆಗಾಗಿ ಪತಿ ಮತ್ತು ಆತನ ಕುಟುಂಬದ ಸದಸ್ಯರು ಹಲ್ಲೆ ಮಾಡಿದ ನಂತರ ಗರ್ಭಿಣಿ ಮಹಿಳೆಯು ಗರ್ಭಪಾತಕ್ಕೆ ಒಳಗಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಸೇರಿದಂತೆ 7 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೆಹಲಿಯ ಗಾಜಿಪುರದ ಶಿವಾನಿ ಶರ್ಮಾ(25) ಒಂದೂವರೆ ವರ್ಷಗಳ ಹಿಂದೆ ಗ್ರೇಟರ್ ನೋಯ್ಡಾದ ಡಂಕೌರ್ ನಿವಾಸಿ ಸುಶೀಲ್ ನನ್ನು ಮದುವೆಯಾಗಿದ್ದರು. ಆಕೆಯ ಕುಟುಂಬದಿಂದ ಸುಶೀಲ್ ಮನೆಯವರು ವರದಕ್ಷಿಣೆ ಪಡೆದುಕೊಂಡಿದ್ದರು. ಆದರೂ ತೃಪ್ತಿ ಇಲ್ಲದೇ ಹೆಚ್ಚಿನ ವರದಕ್ಷಿಣೆ ತರುವಂತೆ ಶಿವಾನಿಗೆ ಪೀಡಿಸಿದ್ದಾರೆ. ತನ್ನ ಅತ್ತೆಯಿಂದ ಪದೇ ಪದೇ ಕಿರುಕುಳಕ್ಕೆ ಒಳಗಾಗುತ್ತಿದ್ದೆ ಎಂದು ಶಿವಾನಿ ಹೇಳಿಕೊಂಡಿದ್ದಾಳೆ.

ಏಪ್ರಿಲ್ ತಿಂಗಳಲ್ಲಿ ಆಕೆಯ ಪತಿ ಮತ್ತು ಅವರ ಕುಟುಂಬ ಸದಸ್ಯರು ದುಪಟ್ಟಾ ಬಳಸಿ ತನ್ನನ್ನು ಕತ್ತು ಹಿಸುಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾಳೆ. ಆ ಸಮಯದಲ್ಲಿ, ಅವಳು ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಆಕೆ ಹೇಗೋ ತಪ್ಪಿಸಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬದ ಸದಸ್ಯರು ಹೇಳಿದ್ದಾರೆ.  ಡಂಕೌರ್ ಪೊಲೀಸರು ಮಹಿಳೆಯ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...