ʼನೋ ಪಾರ್ಕಿಂಗ್ʼ ಸ್ಥಳದಲ್ಲಿ ವಾಹನವನ್ನ ನಿಲ್ಲಿಸಿದ್ರೆ ಅಥವಾ ಸೂಕ್ತವಾದ ದಾಖಲೆ ಇಲ್ಲದೇ ಇದ್ದಲ್ಲಿ ಪೊಲೀಸರು ಅದನ್ನ ತೆಗೆದುಕೊಂಡು ಹೋಗಿ ಸ್ಟೇಷನ್ನಲ್ಲಿ ಇಡ್ತಾರೆ. ಬಳಿಕ ಪೊಲೀಸರ ಕೈನಿಂದ ವಾಹನವನ್ನ ವಾಪಸ್ ಪಡೆಯಬೇಕು ಅಂದರೆ ಅನೇಕ ಕಾನೂನು ಕ್ರಮಗಳನ್ನ ಪಾಲಿಸಬೇಕಾಗುತ್ತದೆ.
ಆದರೆ ಇಂಗ್ಲೆಂಡ್ನ ಪೊಲೀಸರು ಸೂಕ್ತ ದಾಖಲೆ ಹೊಂದಿರದ ವಾಹನವನ್ನ ತೆಗೆದುಕೊಂಡು ಹೋದ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆಯನ್ನ ಎದುರಿಸುತ್ತಿದ್ದಾರೆ.
ಜೂನ್ 4ನೇ ತಾರೀಖಿನಂದು ನಡೆದ ಘಟನೆ ಇದಾಗಿದ್ದು ಸಣ್ಣ ಮೆಕಾನಿಕಲ್ ಮಿನಿ ಎಲೆಕ್ಟ್ರಿಕ್ ಸ್ಕೂಟರ್ನ್ನು ಪೊಲೀಸರು ಬರೋಬ್ಬರಿ 7.5 ಟನ್ ಟ್ರಕ್ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಅಬ್ಬಬ್ಬಾ ಅಂದ್ರೆ 15 ಕೆಜಿ ಇರಬಹುದು..!
ಈ ಫೋಟೋವನ್ನ ಪೊಲೀಸರು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಇದನ್ನ ನೋಡಿದ ನೆಟ್ಟಿಗರು ಇಷ್ಟು ಪುಟ್ಟ ವಾಹನಕ್ಕೆ ಅಂತಾ ದೊಡ್ಡ ಟ್ರಕ್ ಬಳಕೆ ಮಾಡುವ ಅವಶ್ಯಕತೆ ಇತ್ತೇ..? ಜನರ ತೆರಿಗೆ ಹಣವನ್ನ ಈ ರೀತಿ ದುರ್ಬಳಕೆ ಮಾಡುತ್ತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ.
https://www.facebook.com/herefordcops/photos/a.1632830357000249/2967982306818374/?type=3