alex Certify ದೊಡ್ಮನೆ ಹುಡುಗನ ಕಟ್ಟಕಡೆಯ ಸಿನಿಮಾ ‘ಜೇಮ್ಸ್’ ರಿಲೀಸ್‌ ಗೆ ಭರ್ಜರಿ ತಯಾರಿ; 4500 ಪರದೆಗಳಲ್ಲಿ ಸಿನಿಮಾ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಮನೆ ಹುಡುಗನ ಕಟ್ಟಕಡೆಯ ಸಿನಿಮಾ ‘ಜೇಮ್ಸ್’ ರಿಲೀಸ್‌ ಗೆ ಭರ್ಜರಿ ತಯಾರಿ; 4500 ಪರದೆಗಳಲ್ಲಿ ಸಿನಿಮಾ ಬಿಡುಗಡೆ

ಅಭಿಮಾನಿಗಳ ಆರಾಧ್ಯ ದೈವ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿದ್ದಾರೆ. ಜೇಮ್ಸ್ ಪುನೀತ್ ಅಭಿನಯದ ಕೊನೆಯ ಚಿತ್ರವಾಗಲಿದೆ. ಇನ್ಮೇಲೆ ಪುನೀತ್ ಅವರ ಮತ್ಯಾವುದೇ ಚಿತ್ರ ತೆರೆ ಕಾಣುವುದಿಲ್ಲ ಎಂಬ ವಿಷಯ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಪುನೀತ್ ಇಹಲೋಕದಿಂದ ದೂರವಾದ ಮೇಲೂ ಜೇಮ್ಸ್ ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ಮರಳಿ ಬರುತ್ತಿದ್ದಾರೆ.

ಹೌದು, ಜೇಮ್ಸ್ ಬಿಡುಗಡೆಗೆ ಚಿತ್ರತಂಡ ಬಿಗ್ ಪ್ಲಾನ್ ಗಳನ್ನ ರೂಪಿಸಿಕೊಂಡಿದೆ‌. ಪವರ್ ಪ್ಯಾಕ್ಡ್ ಜೇಮ್ಸ್ ಸಿನಿಮಾ ವಿಶ್ವದಾದ್ಯಂತ 4500 ಪರದೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರವನ್ನು ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲು ಸಿನಿತಂಡ ನಿರ್ಧರಿಸಿತ್ತು, ಆದರೆ ಪುನೀತ್ ಮೇಲೆ ಅನ್ಯ ಭಾಷಿಕರಿಗೆ ಇರುವ ಪ್ರೀತಿ ನೋಡಿ ಐದು ಭಾಷೆಗಳಲ್ಲಿ ಜೇಮ್ಸ್ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಕಳೆದ ಶನಿವಾರ, ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ ನ ಒಂದು ಭಾಗವಾಗಿ ಜೇಮ್ಸ್ ಚಿತ್ರತಂಡ ಹಾಗೂ ಸಿನಿರಂಗದ ಗಣ್ಯ ನಿರ್ದೇಶಕ, ನಿರ್ಮಾಪಕರು ಕಾರ್ಯಕ್ರಮವೊಂದನ್ನ ನಡೆಸಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್, ಪುನೀತ್ ಜೊತೆಗೆ ಕಳೆದ ಸಮಯವನ್ನು ಹಂಚಿಕೊಂಡರು‌. ಅವರ ಸಾವಿನ ನಂತರ ಜೇಮ್ಸ್ ಚಿತ್ರಕ್ಕಿದ್ದ ಸವಾಲುಗಳ ಬಗ್ಗೆಯೂ ಮಾತನಾಡಿದ್ರು.

​​ರಾಹುಲ್​ ಗಾಂಧಿ ಟ್ವಿಟರ್​ ಫಾಲೋವರ್ಸ್​ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ

ಜೇಮ್ಸ್ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಪುನೀತ್ ನಟಿಸಿದ್ದಾರೆ. ಯಾವುದೇ ಒಂದು ಪಾತ್ರಕ್ಕೆ, ಅದಕ್ಕೆ ತಕ್ಕಂತ ಧ್ವನಿ‌ ಮುಖ್ಯವಾಗತ್ತೆ. ಚಿತ್ರಕ್ಕೆ ಡಬ್ಬಿಂಗ್ ಮಾಡಲು ಪುನೀತ್ ಇಲ್ಲ. ನಾವು ರಾ ಫುಟೇಜ್ ಬಳಸಿ ಅದರಿಂದ ಪುನೀತ್ ಸರ್ ಅವರ ಧ್ವನಿ ಎಕ್ಸ್ಟ್ರಾಕ್ಟ್ ಮಾಡಲು ಪ್ರಯತ್ನಿಸಿದೆವು, ಆದರೆ ಅದು ಸಾಧ್ಯವಾಗಲಿಲ್ಲ. ಮುಂಬೈಗೆ ತೆರಳಿ ವಾಯ್ಸ್ ಸ್ಪೆಷಲಿಸ್ಟ್ ಗಳಿಂದ ಡಬ್ಬಿಂಗ್ ಮಾಡಿಸಲು ಪ್ರಯತ್ನಿಸಿದೆವು, ಆದರೆ ಮ್ಯಾಚ್ ಆಗಲಿಲ್ಲ. ಕಡೆಗೆ ನಮ್ಮ ತಂಡಕ್ಕೆ ಅನಿಸಿದ್ದು, ಶಿವಣ್ಣ ಈ ಪಾತ್ರಕ್ಕೆ ಉತ್ತಮ ಧ್ವನಿಯಾಗುತ್ತಾರೆಂದು. ಹಾಗಾಗಿ ಶಿವಣ್ಣನವರೇ ಧ್ವನಿ‌ ನೀಡಿದ್ರು, ಈ ಪ್ರಕ್ರಿಯೆಯಲ್ಲಿ ರಾಘಣ್ಣ ಕೂಡ ಸಾಥ್ ನೀಡಿದ್ರು ಎಂದಿದ್ದಾರೆ.

ಇದೇ ವೇಳೆ ಮತ್ತೊಂದು ವಿಚಾರ ಹಂಚಿಕೊಂಡ ಚೇತನ್, ಪುನೀತ್ ಅವ್ರಿಗೆ ತಮ್ಮ ಹುಟ್ಟುಹಬ್ಬದ ದಿನದಂದು ಅವರ ಯಾವುದಾದರೂ ಸಿನಿಮಾ ರಿಲೀಸ್ ಆಗಬೇಕು ಅನ್ನೋ ಆಸೆ ಇತ್ತು. ಅವರು ಬದುಕಿರುವಾಗ ಅದು ಸಾಧ್ಯವಾಗಿರಲಿಲ್ಲ. ಈಗ ಜೇಮ್ಸ್ ಸಿನಿಮಾ ಅವರ ಹುಟ್ಟು ಹಬ್ಬದಂದು ಬಿಡುಗಡೆಯಾಗುತ್ತಿದೆ ಎಂದು ಎಮೋಷನಲ್ ಆದರು. ಇನ್ನು ಕಾರ್ಯಕ್ರಮದಲ್ಲಿ, ಹಿರಿಯ ಫಿಲ್ಮ್ ಮೇಕರ್ ಪಿ. ಶೇಷಾದ್ರಿ, ನಿರ್ಮಾಪಕ ಸೂರಪ್ಪ ಬಾಬು, ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಹಾಗೂ ಪವನ್ ವಡೆಯರ್ ಭಾಗವಹಿಸಿದ್ರು‌. ಈ ಸಂದರ್ಭದಲ್ಲಿ ಎಲ್ಲರೂ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಒಡನಾಟದ ಬಗ್ಗೆ ಹಂಚಿಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...