alex Certify Mysore Dasara : ಈ ಬಾರಿ ಅದ್ದೂರಿಯಾಗಿ ‘ದಸರಾ ಮಹೋತ್ಸವ’ ಆಚರಿಸಲು ಚಿಂತನೆ : ಸಚಿವ ಹೆಚ್.ಸಿ ಮಹದೇವಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Mysore Dasara : ಈ ಬಾರಿ ಅದ್ದೂರಿಯಾಗಿ ‘ದಸರಾ ಮಹೋತ್ಸವ’ ಆಚರಿಸಲು ಚಿಂತನೆ : ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು : ಈ ಬಾರಿ ಅದ್ದೂರಿ ‘ಮೈಸೂರು ದಸರಾ’ ಮಹೋತ್ಸವ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಹೆಚ್ ಸಿ ಮಹದೇವಪ್ಪ ಕಳೆದ ಬಾರಿ ಕೋವಿಡ್ ಹಿನ್ನೆಲೆ ರಾಜ್ಯದ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಅದ್ದೂರಿಯಾಗಿ ಮೈಸೂರು ದಸರಾ ನಡೆದಿರಲಿಲ್ಲ . ಈ ಬಾರಿ ಅದ್ದೂರಿಯಾಗಿ ‘ಮೈಸೂರು ದಸರಾ’ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದರು. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗ ರಾಜ್ಯ ಸುಭಿಕ್ಷವಾಗಿದೆ, ಹೊಸ ಸರ್ಕಾರ ಬಂದಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.

ಪ್ರಸಕ್ತ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅ.15 ರಿಂದ 24 ರವರೆಗೆ ದಸರಾ ಮಹೋತ್ಸವ ನಡೆಯಲಿದೆ.ಅಕ್ಟೋಬರ್ 15 ರಂದು ದಸರಾ ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 24 ರಂದು ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ನಡೆಯಲಿದೆ ಎಂದು ಹೇಳಲಾಗಿದೆ.

ಅದೇ ರೀತಿ ಮಹಿಷಾ ದಸರಾ ಆಚರಣೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಮಹಿಷಾ ದಸರಾಗೆ ಆಚರಣೆಗೆ ಮತ್ತೆ ಅವಕಾಶ ಸಿಗಲಿದೆ ಎನ್ನಲಾಗಿದೆ. ದಸರಾ ಮಹೋತ್ಸವದ ವೇಳೆ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಟ್ಟದ ಮಹಿಷಾಸುರ ಪ್ರತಿಮೆ ಮುಂದೆ ಮಹಿಷಾ ದಸರಾ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದಕ್ಕೆ ತಡೆ ನೀಡಲಾಗಿತ್ತು. ಇದೀಗ ಮಹಿಷಾ ದಸರಾಗೆ ಆಚರಣೆಗೆ ಮತ್ತೆ ಅವಕಾಶ ಸಿಗಲಿದ್ಯಾ..ಇಲ್ಲವಾ ಕಾದು ನೋಡಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...