alex Certify BIG NEWS: ಕೇಂದ್ರದಿಂದ ಹೊಸ ನಿಯಮ: ದೊಡ್ಡ ಕಟ್ಟಡಗಳ ಸುತ್ತ ಶೇ. 10 ರಷ್ಟು ಮರ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇಂದ್ರದಿಂದ ಹೊಸ ನಿಯಮ: ದೊಡ್ಡ ಕಟ್ಟಡಗಳ ಸುತ್ತ ಶೇ. 10 ರಷ್ಟು ಮರ ಕಡ್ಡಾಯ

ನವದೆಹಲಿ: ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಿದೆ. ದೊಡ್ಡ ಕಟ್ಟಡಗಳ ಸುತ್ತ ಶೇಕಡ 10 ರಷ್ಟು ಗಿಡ ಮರ ಬೆಳೆಸುವುದು ಕಡ್ಡಾಯಗೊಳಿಸಲಾಗಿದೆ.

5000 ಚ.ಮೀ. ಗಾತ್ರದ ಕಟ್ಟಡಗಳಿಗೆ ಇದು ಅನ್ವಯವಾಗುತ್ತದೆ. ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗಲಿರುವ ಹೊಸ ಲೇಔಟ್ ಗಳಲ್ಲಿ ಗಿಡಮರಗಳನ್ನು ಬೆಳೆಸಬೇಕಿದೆ. ವಾಣಿಜ್ಯ ಕಟ್ಟಡಗಳ ಸುತ್ತಲೂ ಮರಗಳನ್ನು ಬೆಳೆಸಬೇಕಿದೆ. ಕೇಂದ್ರ ಪರಿಸರ ಸಚಿವಾಲಯದಿಂದ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಹೊಸ ಪ್ರಸ್ತಾಪ ಮಾಡಲಾಗಿದೆ. ‘ಕಟ್ಟಡ ನಿರ್ಮಾಣ ಪರಿಸರ ನಿರ್ವಹಣೆ ನಿಯಂತ್ರಣ -2022’ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಕೇಳಲಾಗಿದೆ.

5 ಸಾವಿರ ಚ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣದ ಹೊಸ ಕಟ್ಟಡ ಯೋಜನೆ, ಬಡಾವಣೆಗಳ ನಿರ್ಮಾಣ, ಹಳೆ ಕಟ್ಟಡಗಳ ನವೀಕರಣದ ಸಂದರ್ಭದಲ್ಲಿ ಪ್ರತಿ 80 ಚ.ಮೀ. ಒಂದು ಮರ ಇರಬೇಕು. ಇಡೀ ಕಟ್ಟಡ ಪ್ರದೇಶದಲ್ಲಿ ಶೇಕಡ 10 ರಷ್ಟು ಹಸಿರು ವಲಯ ಇರಬೇಕು. ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ವ್ಯವಸ್ಥೆ ಅಳವಡಿಸುವಂತೆ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...