ದೇಶದಲ್ಲಿ ಇಂಗಾಲದ ಮಾನಾಕ್ಸೈಡ್ ಮತ್ತು ಹೆೈಡ್ರೋಕಾರ್ಬನ್ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದು, ಬಿಎಸ್-4 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿ ಸಿ.ಎನ್.ಜಿ. ಮತ್ತು ಎಲ್.ಪಿ.ಜಿ. ಕಿಟ್ಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಈಗಿನಂತೆ, ಬಿಎಸ್-4 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿರುವ ವಾಹನಗಳಲ್ಲಿ ಮಾತ್ರ ಇಂತಹ ಮಾರ್ಪಾಡುಗಳನ್ನು ಅನುಮತಿಸಲಾಗಿದೆ.
ಬಿಎಸ್ (ಭಾರತ್ ಸ್ಟೇಜ್)-4 ಗ್ಯಾಸೋಲಿನ್ ವಾಹನಗಳಲ್ಲಿ ಸಿ.ಎನ್.ಜಿ. ಮತ್ತು ಎಲ್.ಪಿ.ಜಿ. ಕಿಟ್ಗಳನ್ನು ಮರುಹೊಂದಿಸಲು ಮತ್ತು 3.5 ಟನ್ಗಳಿಗಿಂತ ಕಡಿಮೆ ಇರುವ ಬಿಎಸ್-4 ವಾಹನಗಳ ಸಂದರ್ಭದಲ್ಲಿ ಡೀಸೆಲ್ ಎಂಜಿನ್ಗಳನ್ನು ಸಿ.ಎನ್.ಜಿ./ಎಲ್.ಪಿ.ಜಿ. ಎಂಜಿನ್ಗಳೊಂದಿಗೆ ಬದಲಾಯಿಸಲು ಸೂಚಿಸಲಾಗಿದೆ.
ಅಧಿಸೂಚನೆಯು ರಿಟ್ರೊಫಿಟ್ಮೆಂಟ್ಗೆ ವಿಧದ ಅನುಮೋದನೆಯ ಅವಶ್ಯಕತೆಗಳನ್ನು ತಿಳಿಸುತ್ತದೆ. ಸಿ.ಎನ್.ಜಿ. ಪರಿಸರ ಸ್ನೇಹಿ ಇಂಧನವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳಿಗೆ ಹೋಲಿಸಿದರೆ ಕಾರ್ಬನ್ ಮಾನಾಕ್ಸೈಡ್, ಹೈಡ್ರೋಕಾರ್ಬನ್, ಹೊಗೆಯ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಚಿವಾಲಯವು ಹೇಳಿದೆ.