ನವದೆಹಲಿ: ಡೆಲ್ಟಾ ಪ್ಲಸ್ ಕಳವಳಕಾರಿ ಪ್ರದೇಶವಾಗಿದೆ ಎಂದು ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯಿಂದ ಘೋಷಣೆ ಮಾಡಲಾಗಿದೆ.
ಡೆಲ್ಟಾ ಪ್ಲಸ್ ಆಸಕ್ತಿಕರ ಪ್ರಭೇದ ಎಂದು ಪರಿಗಣಿಸಲಾಗಿತ್ತು. ಕೇಂದ್ರ ಸರ್ಕಾರ ಈ ಹಿಂದೆ ಆಸಕ್ತಿಕರ ಪ್ರಭೇದ ಎಂದು ಹೇಳಿದ್ದು, ಈಗ ಡೆಲ್ಟಾ ಪ್ಲಸ್ ಕಳವಳಕಾರಿಯಾಗಿದೆ ಎಂದು ಘೋಷಣೆ ಮಾಡಿದೆ.
ಮಹಾರಾಷ್ಟ್ರ 21, ಕೇರಳ 3, ಮಧ್ಯಪ್ರದೇಶದಲ್ಲಿ 1 ಪ್ರಕರಣ ಕಂಡುಬಂದಿದೆ. ಕಂಟೇನ್ಮೆಂಟ್ ಕಾರ್ಯತಂತ್ರ ಕಟ್ಟುನಿಟ್ಟಾಗಿ ಜಾರಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಈ ಮೂರು ರಾಜ್ಯಗಳಿಗೆ ಮಾರ್ಗಸೂಚಿ ನೀಡಲಾಗಿದೆ.
ಕೊರೋನಾ ಎರಡನೆಯ ಅಲೆಯಿಂದ ದೇಶ ಪಾರಾಗುತ್ತಿರುವ ಹೊತ್ತಲ್ಲೇ ಮತ್ತೊಂದು ರೂಪಾಂತರ ತಳಿಯಾಗಿರುವ ಡೆಲ್ಟಾ ಪ್ಲಸ್ ಆತಂಕ ಮೂಡಿಸಿದೆ.