ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಬಡವರ ಅನುಕೂಲಕ್ಕಾಗಿ ಜಾರಿಗೆ ತರುವ ಯೋಜನೆಗಳ ಬಗ್ಗೆ ತುಂಬ ಜನರಿಗೆ ಮಾಹಿತಿಯೇ ಇರುವುದಿಲ್ಲ. ಹಾಗಾಗಿ, ಕಾರ್ಮಿಕರಿಗೆ, ಅಸಂಘಟಿತ ವಲಯದ ನೌಕರರಿಗೆ ಹೆಚ್ಚಿನ ಯೋಜನೆಗಳ ಬಗ್ಗೆ ಅರಿವು ಇರುವುದಿಲ್ಲ. ಕೇಂದ್ರ ಸರ್ಕಾರವೀಗ ‘ಪ್ರಧಾನಮಂತ್ರಿ ಶ್ರಮ ಯೋಜನೆ ‘ ಜಾರಿಗೊಳಿಸಿದ್ದು, ಇದರಿಂದ ಅಸಂಘಟಿತ ವಲಯದ ನೌಕರರಿಗೆ ಅನುಕೂಲವಾಗಲಿದೆ.
ದೇಶ ಸ್ವಾತಂತ್ರ್ಯ ಗಳಿಸಿ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರಮ ಯೋಜನೆ ಅಡಿಯಲ್ಲಿ’ಡೊನೇಟ್ ಎ ಪೆನ್ಶನ್’ ಯೋಜನೆ ಜಾರಿಗೊಳಿಸಿದೆ. ಅಸಂಘಟಿತ ವಲಯದ ಕಾರ್ಮಿಕರು ಯೋಜನೆ ಅಡಿಯಲ್ಲಿ ಮಾಸಿಕ ಮೂರು ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ. ಇದಕ್ಕಾಗಿ ಕಾರ್ಮಿಕರು ಮಾಸಿಕ ಕೇವಲ 100 ರೂ. ಪ್ರೀಮಿಯಂ ಕಟ್ಟಬೇಕಾಗುತ್ತದೆ.
ಕ್ವೀನ್ ಕಂಗನಾಗೆ ಬಿಗ್ ರಿಲೀಫ್; ಲಾಕ್ಅಪ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದ ನ್ಯಾಯಾಲಯ….!
ಉದಾಹರಣೆಗೆ, ಅಸಂಘಟಿತ ವಲಯದ ಕಾರ್ಮಿಕನೊಬ್ಬನಿಗೆ 29 ವರ್ಷ ವಯಸ್ಸಾಗಿದ್ದರೆ, ಆತ ತನ್ನ 60ನೇ ವರ್ಷದವರೆಗೆ ಮಾಸಿಕ 100 ರೂ. ಪ್ರೀಮಿಯಂ ಪಾವತಿಸಬೇಕು. ಇದಕ್ಕೆ ಕೇಂದ್ರ ಸರಕಾರವೂ ಮಾಸಿಕ 100 ರೂ. ಸೇರಿಸುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತರಾದ ಬಳಿಕ ಭವಿಷ್ಯ ನಿಧಿ (ಪಿಎಫ್) ಸೇರಿ ಯಾವುದೇ ಸೌಲಭ್ಯವಿರದ ಕಾರಣ ಕೇಂದ್ರ ಸರ್ಕಾರವು ಹೊಸ ಯೋಜನೆ ಜಾರಿಗೊಳಿಸಿದೆ.
ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 18ರಿಂದ 40 ವರ್ಷದೊಳಗಿನ ಕಾರ್ಮಿಕರು ಕೇಂದ್ರ ಸರ್ಕಾರದ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾಸಿಕ ಕೇವಲ 100 ರೂ. ಇರುವುದರಿಂದ ಹಾಗೂ ಇಷ್ಟೇ ಹಣವನ್ನು ಕೇಂದ್ರ ಸರ್ಕಾರವು ಸಹ ಪಾವತಿಸುವುದರಿಂದ ನಿವೃತ್ತಿ ಬಳಿಕ ಸ್ವಾವಲಂಬಿಯಾಗಿ ಜೀವನ ಸಾಗಿಸಬಹುದಾಗಿದೆ.