alex Certify BIG NEWS: ಕೈದಿಗಳ ಸುರಕ್ಷತೆಗೆ ಮಹತ್ವದ ಕ್ರಮ: ಕೈದಿಗಳು, ಸಂದರ್ಶಕರಿಗೆ ಆಧಾರ್ ದೃಢೀಕರಣ ಕೈಗೊಳ್ಳಲು ನಿರ್ದೇಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೈದಿಗಳ ಸುರಕ್ಷತೆಗೆ ಮಹತ್ವದ ಕ್ರಮ: ಕೈದಿಗಳು, ಸಂದರ್ಶಕರಿಗೆ ಆಧಾರ್ ದೃಢೀಕರಣ ಕೈಗೊಳ್ಳಲು ನಿರ್ದೇಶನ

ನವದೆಹಲಿ: ಎಲ್ಲಾ ಕೈದಿಗಳು ಮತ್ತು ಅವರ ಸಂದರ್ಶಕರು ಈಗ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕಾಗುತ್ತದೆ. ಕೈದಿಗಳ ಸುರಕ್ಷತೆ ಮತ್ತು ಅವರಿಗೆ ಅರ್ಹ ಪ್ರಯೋಜನಗಳನ್ನು ತಲುಪಿಸುವುದನ್ನು ಇದು ಖಾತ್ರಿಪಡಿಸುತ್ತದೆ ಎಂದು ಹೇಳಲಾಗಿದೆ.

ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಕೇಂದ್ರದಿಂದ ಮಾಹಿತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ಮಾಹಿತಿ ಕೇಂದ್ರ(NIC) ಮತ್ತು ePrisons ತಂಡವು ಎಲ್ಲಾ ಜೈಲು ಅಧಿಕಾರಿಗಳ ಅನುಕೂಲಕ್ಕಾಗಿ ePrisons ವೇದಿಕೆಯೊಂದಿಗೆ ಸಂದರ್ಶಕರು, ಜೈಲು ಕೈದಿಗಳ ಆಧಾರ್ ಲಿಂಕ್ ಅಥವಾ ಆಧಾರ್ ದೃಢೀಕರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP) ದಾಖಲೆಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದೆ.

ಜೈಲು ಅಧಿಕಾರಿಗಳು ಕಾಲಕಾಲಕ್ಕೆ ಕೇಂದ್ರ ಸರ್ಕಾರವು ನಿಗದಿಪಡಿಸಿದಂತೆ ಆಧಾರ್ ದೃಢೀಕರಣದ ಬಳಕೆಯ ಎಲ್ಲಾ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಗೃಹ ಸಚಿವಾಲಯ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ, ಜೈಲು ಕೈದಿಗಳು ಮತ್ತು ಅವರ ಸಂದರ್ಶಕರ ಆಧಾರ್ ದೃಢೀಕರಣವನ್ನು ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯಕ್ಕೆ ಅಧಿಕಾರ ನೀಡಲಾಯಿತು.

ಅದರಂತೆ ಸಚಿವಾಲಯವು ಮಾರ್ಚ್ 6 ಮತ್ತು ಸೆಪ್ಟೆಂಬರ್ 29 ರಂದು ಕ್ರಮವಾಗಿ ಅಗತ್ಯ ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿತು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೈಲು ಇಲಾಖೆಗಳು ಜೈಲು ಕೈದಿಗಳು ಮತ್ತು ಅವರ ಸಂದರ್ಶಕರ ಆಧಾರ್ ದೃಢೀಕರಣವನ್ನು ಮಾಡಲು ಅನುಮತಿಸಲಾಗಿದೆ ಎಂದು ಸೂಚಿಸಿದೆ.

ಜೈಲು ಕೈದಿಗಳ ಆಧಾರ್ ದೃಢೀಕರಣದ ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (NIC)/ePrisons ಅನ್ನು ಉಪ-ದೃಢೀಕರಣ ಬಳಕೆದಾರರ ಏಜೆನ್ಸಿಯಾಗಿ ನೋಂದಾಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...