alex Certify ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗುತ್ತೆ 6000 ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗುತ್ತೆ 6000 ರೂಪಾಯಿ

ರೈತರು, ಮಹಿಳೆಯರು, ಬಡವರು, ನಿರ್ಗತಿಕರಿಗಾಗಿ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇವಲ‌ ಮಹಿಳೆಯರಿಗಾಗಿ ಎಂದೇ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು‌ ಹಮ್ಮಿಕೊಂಡಿದ್ದು, ಇದರ ಅಡಿಯಲ್ಲಿ ನೇರವಾಗಿ ಮಹಿಳೆಯರ ಖಾತೆಗೆ 6000 ರೂ. ವರ್ಗಾಯಿಸಲಾಗುತ್ತದೆ.

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ (PMMVY), ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಮಹಿಳಾ ಫಲಾನುಭವಿಗಳಿಗೆ 6000 ರೂ. ವರ್ಗಾಯಿಸುತ್ತದೆ. ಈ ಯೋಜನೆಯ ಪ್ರಯೋಜನವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ, ಯಾವುದೇ ಪುರುಷ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ ಎಂಬುದನ್ನು ಗಮನಿಸಬೇಕು.

ವಿಶ್ರಾಂತಿ ಮೂಡ್‌ ನಲ್ಲಿ ಪಂಜಾಬ್‌ ಸಿಎಂ; ಮೇಕೆ ಹಾಲು ಕರೆದ ಚರಣ್​ಜೀತ್​ ಸಿಂಗ್ ಚನ್ನಿ

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು ?

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಿಣಿಯಾದವರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು, ಜನವರಿ 1, 2017 ರಲ್ಲಿ ಪ್ರಾರಂಭಿಸಲಾಯಿತು.

ಎಲ್ಲಾ ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪೋಷಕರ ಆಧಾರ್ ಕಾರ್ಡ್, ಪೋಷಕರ ಗುರುತಿನ ಚೀಟಿ, ಮಗುವಿನ ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ಪಾಸ್ ಬುಕ್ ಸಲ್ಲಿಸಿ ಅರ್ಜಿ‌ ಹಾಕಬಹುದು.‌

ಯೋಜನೆಯ ಉದ್ದೇಶ

ತಾಯಿ ಮತ್ತು ಮಗುವಿನ ಸರಿಯಾದ ಆರೈಕೆಯ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸರ್ಕಾರವು 6000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಸರ್ಕಾರವು ಈ ಹಣವನ್ನು 3 ಹಂತಗಳಲ್ಲಿ ನೀಡುತ್ತದೆ. ಗರ್ಭಿಣಿಯ ಮಹಿಳೆಯರಿಗೆ, ಮೊದಲ ಹಂತದಲ್ಲಿ 1000, ಎರಡನೇ ಹಂತದಲ್ಲಿ 2000 ಹಾಗೂ ಮೂರನೇ ಹಂತದಲ್ಲಿ 2000 ರೂ. ನೀಡಲಾಗುತ್ತದೆ. ಉಳಿದ ಒಂದು ಸಾವಿರ ರೂಪಾಯಿಯನ್ನು, ಮಗು ಹುಟ್ಟಿದಾಗ ಆಸ್ಪತ್ರೆಗೆ ವರ್ಗಾಯಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...