ಆನ್ಲೈನ್ನಲ್ಲಿ ಹಳೆಯ ಮತ್ತು ಅಪರೂಪದ ನಾಣ್ಯಗಳು ಲಕ್ಷಗಟ್ಟಲೆ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ನಾಣ್ಯ ಸಂಗ್ರಹಕಾರರನ್ನು ಕ್ಷಣಾರ್ಧದಲ್ಲಿ ಸಿರಿವಂತರಾಗುವಂತೆ ಮಾಡುತ್ತಿವೆ.
ಅಂತರ್ಜಾಲದಲ್ಲಿ, ಹಳೆಯ ಮತ್ತು ಸಂಗ್ರಹಿಸಬಹುದಾದ ಕರೆನ್ಸಿಗಳ ಆಸಕ್ತ ಖರೀದಿದಾರರ ಬಳಗ ದೊಡ್ಡದಿದೆ.
Online ನಲ್ಲಿ ಮೂತ್ರ ಮಾರಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿರುವ ಮಾಡೆಲ್
ಹಾಗಾಗಿ, ನೀವು ಅಪರೂಪದ ನಾಣ್ಯ ಅಥವಾ ನೋಟು ಹೊಂದಿದ್ದರೆ, ಅದನ್ನು ಮಾರಾಟ ಮಾಡಲು ಇದು ಸರಿಯಾದ ಸಮಯ. ಉದಾಹರಣೆಗೆ, ನಿಮ್ಮ ಬಳಿ 2 ರೂ.ನ ವಿಶೇಷ ನಾಣ್ಯವಿದ್ದರೆ, ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ನೀವು ಸುಮಾರು ಐದು ಲಕ್ಷ ರೂ. ಗಳಿಸಬಹುದು. ಇಲ್ಲಿ ಉಲ್ಲೇಖಿಸಲಾದ ವಿಶೇಷ ನಾಣ್ಯವು 1994 ರ ಸರಣಿಯಾಗಿದೆ. ಝೀ ನ್ಯೂಸ್ ಹಿಂದಿಯ ವರದಿಯ ಪ್ರಕಾರ ಈ ನಾಣ್ಯಗಳ ಬೇಡಿಕೆಯು ಹಲವಾರು ಪಟ್ಟು ಹೆಚ್ಚಾಗಿದೆ.
ನಾಣ್ಯದ ಹಿಂಭಾಗದಲ್ಲಿ ವಿಶ್ವ ಆಹಾರ ದಿನದ ಶಾಸನವಿದೆ. ಆನ್‌ಲೈನ್ ಜಾಹೀರಾತಿನ ಪೋರ್ಟಲ್ ಕ್ವಿಕರ್‌ನಲ್ಲಿ ನಾಣ್ಯದ ಬೆಲೆಯನ್ನು ಐದು ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
ಅದೇ ರೀತಿ, ಬ್ರಿಟಿಷರ ಆಳ್ವಿಕೆಯಲ್ಲಿ ಬಿಡುಗಡೆಯಾದ ರಾಣಿ ವಿಕ್ಟೋರಿಯಾ ಅವರ ಮುಖವಿರುವ ಒಂದು ರೂಪಾಯಿ ಬೆಳ್ಳಿ ನಾಣ್ಯದ ಮೌಲ್ಯವನ್ನು ಕ್ಲಾಸಿಫೈಡ್ ಪೋರ್ಟಲ್‌ಗಳಲ್ಲಿ ಮಾರಾಟಗಾರರು 2 ಲಕ್ಷ ರೂ. ಕೊಟ್ಟು ಖರೀದಿ ಮಾಡಲು ಸಜ್ಜಾಗಿದ್ದಾರೆ.
ಅಲ್ಲದೇ, 1918 ರಲ್ಲಿ ಬಿಡುಗಡೆಯಾದ ಒಂದು ರೂಪಾಯಿ ನಾಣ್ಯದ ಬೆಲೆ ಇ-ಕಾಮರ್ಸ್ ಜಾಲತಾಣ ಕ್ವಿಕರ್ ನಲ್ಲಿ 9 ಲಕ್ಷ ರೂಪಾಯಿಗೆ ಏರಿಕೆ ಕಂಡಿದೆ.