ಹಳೆಯ ವಸ್ತುಗಳನ್ನು ಗುಜರಿಗೆ ಹಾಕುವ ಕಾಲ ಮುಗಿದಿದೆ. ಈಗ ಹಳೆಯ ಸ್ಕೂಟರ್, ತಾಮ್ರದ ಪಾತ್ರೆಗಳು, ಹಳೆಯ ವಿನ್ಯಾಸದ ಕರಕುಶಲ ವಸ್ತುಗಳನ್ನು ’ಆ್ಯಂಟಿಕ್’ ಹೆಸರಲ್ಲಿ ಲಕ್ಷ ಗಟ್ಟಲೆ ಹಣ ಕೊಟ್ಟು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಹಳೆಯ 10 ರೂ. ಮುಖಬೆಲೆಯ ನೋಟು ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಲ್ಲಿಸಿದ ಮೇಲೆ, ನಾಣ್ಯ-ನೋಟು ಸಂಗ್ರಹಕಾರರ ಬಳಿ ಇರುವ ಹಳೆಯ ನೋಟಿಗೆ ಚಿನ್ನದ ಬೆಲೆ ಬಂದಿದೆಯಂತೆ.
ಬಹಳ ಮುಖ್ಯವಾಗಿ ಹಳೆಯ 10 ರೂ. ಮುಖಬೆಲೆಯ ನೋಟಿನ ಹಿಂಬದಿಯಲ್ಲಿ ಕೊನಾರ್ಕ್ ಸೂರ್ಯದೇಗುಲದ ರಥದ ಚಕ್ರದ ಚಿತ್ರವಿರಬೇಕು. ಜತೆಗೆ ಆ ನೋಟಿನ ಸರಣಿ ಸಂಖ್ಯೆ 786ನಿಂದ ಮುಕ್ತಾಯಗೊಳ್ಳಬೇಕು. ಹಾಗಿದ್ದಲ್ಲಿ, ನೀವು ಕ್ಲಿಕ್ ಇಂಡಿಯಾ ಹೆಸರಿನ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಮಾರಾಟಗಾರರಾಗಿ ಆನ್‌ಲೈನ್ ಮಾರುಕಟ್ಟೆ ಪ್ರವೇಶಿಸಬಹುದು.
ʼಬಿಗ್ ಬಿʼ ಜೊತೆ ಹಾಟ್ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್
ನಿಮ್ಮ ಬಳಿಯಿರುವ ಅಪರೂಪದ ಹಳೆಯ ನೋಟಿನ ಫೋಟೊಗಳನ್ನು ಅಪ್‌ಲೋಡ್ ಮಾಡಿದರೆ, ಆಸಕ್ತರು ತಮ್ಮ ಇಚ್ಛಿತ ಮೌಲ್ಯವನ್ನು ನಿಮ್ಮೆದುರು ಇರಿಸಿ ಚೌಕಾಶಿ ಆರಂಭಿಸುತ್ತಾರೆ. ಕೆಲವರು 10 ರೂ. ನೋಟಿಗೆ 5 ಲಕ್ಷ ರೂ. ಹಣವನ್ನು ವಾಟ್ಸ್‌ಆ್ಯಪ್ ನ ಬುಸಿನೆಸ್ ಅಕೌಂಟ್ ಮತ್ತು ಪೇಮೆಂಟ್ ಮೂಲಕವೇ ಪಡೆದಿದ್ದಾರಂತೆ.