ಗೊರಿಲ್ಲಾಗಳು ವಿಭಿನ್ನ ಧ್ವನಿಗಳನ್ನು ಗುರುತಿಸಬಲ್ಲವು ಎಂದು ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಕಂಡು ಹಿಡಿದಿದೆ. ತಮ್ಮ ಜಾತಿಯ ಧ್ವನಿಯನ್ನು ಗುರುತಿಸುವುದು ಸಾಮಾನ್ಯವಾಗಿದೆ. ಆದರೆ, ಗೊರಿಲ್ಲಾಗಳು ಮಾನವ ಧ್ವನಿಗಳಲ್ಲಿನ ವ್ಯತ್ಯಾಸಗಳನ್ನು ಸಹ ಗುರುತಿಸಬಲ್ಲವು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ಅಟ್ಲಾಂಟಾ ಮೃಗಾಲಯದಲ್ಲಿನ ಗೊರಿಲ್ಲಾಗಳನ್ನು ಈ ಅಧ್ಯಯನಕ್ಕಾಗಿ ಬಳಸಲಾಯಿತು. ಮೂರು ವಿಭಿನ್ನ ಆಡಿಯೊ ರೆಕಾರ್ಡಿಂಗ್‌ಗಳನ್ನು ಪ್ಲೇ ಮಾಡಲಾಯಿತು. ಮೊದಲ ರೆಕಾರ್ಡ್ ನಲ್ಲಿ ಗೊರಿಲ್ಲಾಗಳಿಗೆ ಪರಿಚಿತವಿರುವ ಜನರ ರೆಕಾರ್ಡಿಂಗ್ ಪ್ಲೇ ಮಾಡಲಾಯ್ತು. ಇವರಲ್ಲಿ ನಾಲ್ಕು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಗೊರಿಲ್ಲಾಗಳನ್ನು ನೋಡಿಕೊಳ್ಳುತ್ತಿದ್ದ ಕೀಪರ್‌ಗಳು ಸೇರಿದ್ದಾರೆ. ನಂತರದ್ದು ಪಶುವೈದ್ಯ ಸಿಬ್ಬಂದಿ, ನಿರ್ವಹಣೆ ಕೆಲಸಗಾರರ ಧ್ವನಿಯನ್ನು ಪ್ಲೇ ಮಾಡಲಾಯಿತು. ಮೂರನೆಯದಾಗಿ ಅಪರಿಚಿತ ವ್ಯಕ್ತಿಗಳ ಧ್ವನಿಯನ್ನು ಪ್ಲೇ ಮಾಡಲಾಯಿತು.
ಪ್ರಿಯತಮನಿಗಾಗಿ ನಡುರಸ್ತೆಯಲ್ಲೇ ಯುವತಿಯರಿಬ್ಬರ ನಡುವೆ ಸಖತ್ ಫೈಟ್..!
ಗೊರಿಲ್ಲಾಗಳಿಗೆ ಕೇಳಿಸಿದ ಎಲ್ಲಾ ಧ್ವನಿಯು ಗುಡ್ ಮಾರ್ನಿಂಗ್, ಹಲೋ ಪದಗಳನ್ನು ಒಳಗೊಂಡಿತ್ತು. ಈ ಪದಗಳನ್ನು ಸಾಮಾನ್ಯವಾಗಿ ಗೊರಿಲ್ಲಾಗಳಿಗೆ ಹೇಳಲಾಗುತ್ತದೆ. ಈ ವೇಳೆ ಪರಿಚಿತ ಧ್ವನಿಗೆ ಗೊರಿಲ್ಲಾ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ರೆ, ಅಪರಿಚಿತ ಧ್ವನಿಗೆ ಸ್ವಲ್ಪ ಬೆದರಿದಂತೆ ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.