ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಎಲ್ಲೆಡೆ ತಯಾರಿ ನಡೆಯುತ್ತಿದೆ. ಪ್ರತಿ ಮನೆ ಮೇಲೂ ದೇಶದ ಧ್ವಜ ಹಾರಬೇಕೆಂದು ಸರ್ಕಾರ ಬಯಸಿದ್ದು, ಧ್ವಜ ತಲುಪಿಸುವ ಕೆಲಸ ಕೂಡ ನಡೆದಿದೆ.
ತ್ರಿವರ್ಣ ಬಣ್ಣಕ್ಕೆ ತಿರುಗುವ ಜಲಪಾತಗಳಿಂದ ಹಿಡಿದು ರಾಷ್ಟ್ರೀಯ ಧ್ವಜದ ಬಣ್ಣಗಳಲ್ಲಿ ಬೆಳಗುತ್ತಿರುವ ಸ್ಮಾರಕಗಳವರೆಗೆ, ಸ್ವಾತಂತ್ರ್ಯ ದಿನಾಚರಣೆಯ ಉತ್ಸಾಹವು ಕಾಣಿಸುತ್ತಿದೆ. ಈಗ, ಅದೇ ಉತ್ಸಾಹವನ್ನು ಇಟ್ಟುಕೊಂಡು, ತ್ರಿವರ್ಣದಲ್ಲಿ ತಯಾರಿಸಲಾದ ಹಲವಾರು ಭಕ್ಷ್ಯಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಗೋರಖ್ಪುರದ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಗುರುತಿಸಲು ತ್ರಿವರ್ಣ ಭಕ್ಷ್ಯಗಳನ್ನು ನೀಡುತ್ತಿದೆ.
ಈಗ ವೈರಲ್ ಆಗಿರುವ ಚಿತ್ರಗಳಲ್ಲಿ ಪಾಸ್ತಾ, ಸ್ಯಾಂಡ್ವಿಚ್, ಫ್ರೈಡ್ ರೈಸ್ ಮತ್ತು ಪಾನೀಯಗಳನ್ನು ಸಹ ತ್ರಿವರ್ಣದಲ್ಲಿ ಸಿದ್ಧಪಡಿಸಿದೆ. ಈ ರೆಸ್ಟೋರೆಂಟ್ ಅನ್ನು ನಿತೀಶ್ ಶುಕ್ಲಾ ನಿರ್ವಹಿಸುತ್ತಿದ್ದಾರೆ, ಅವರು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ವಿಭಿನ್ನವಾಗಿ ಆಚರಿಸಲು ಬಯಸಿದ್ದರಿಂದ ತಮ್ಮಲ್ಲಿ ತಯಾರಾಗುವ ಆಹಾರಕ್ಕೆ ಈ ಸ್ಪರ್ಶ ನೀಡಿದ್ದಾರೆಂದು ವರದಿಯಾಗಿದೆ.
ನಾನು ಸೇನಾ ಹಿನ್ನೆಲೆಯಿಂದ ಬಂದಿದ್ದೇನೆ, ಆದ್ದರಿಂದ ನಾವು ಈ ವರ್ಷ ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ಮಾಡಲು ಯೋಚಿಸಿದ್ದೇವೆ. ಈ ವರ್ಷ ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವುದರಿಂದ ನಮ್ಮ ಭಕ್ಷ್ಯಗಳನ್ನು ನಮ್ಮ ತ್ರಿವರ್ಣ ಧ್ವಜದ ಸ್ಪರ್ಶದೊಂದಿಗೆ ಗ್ರಾಹಕರಿಗೆ ಪ್ರಸ್ತುತಪಡಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.