alex Certify ಗೂಗಲ್ ಕ್ರೋಮ್ ಬಳಸ್ತೀರಾ ? ಹಾಗಾದ್ರೆ ಇಲ್ಲಿದೆ ನಿಮಗೊಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್ ಕ್ರೋಮ್ ಬಳಸ್ತೀರಾ ? ಹಾಗಾದ್ರೆ ಇಲ್ಲಿದೆ ನಿಮಗೊಂದು ಮಹತ್ವದ ಮಾಹಿತಿ

Google will officially stop supporting Chrome for Windows 7 and Windows 8.1 from next year- Technology News, Firstpost

ಗೂಗಲ್ ಕ್ರೋಮ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮುಂದಿನ ವರ್ಷದ ವೇಳೆಗೆ ಮೈಕ್ರೋಸಾಫ್ಟ್ ನ ವಿಂಡೋಸ್ 7 ಹಾಗೂ ವಿಂಡೋಸ್ 8.1 ಗಳಿಗೆ ಗೂಗಲ್ ಕ್ರೋಮ್ ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಈ ಆಪರೇಟಿಂಗ್ ಸಿಸ್ಟಮ್ ಹೊಂದಿರುವವರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

2023ರ ಫೆಬ್ರವರಿ ಬಳಿಕ ಗೂಗಲ್ ಕ್ರೋಮ್, ವಿಂಡೋಸ್ 7 ನಲ್ಲಿ ಅಪ್ಡೇಟ್ ಆಗುವುದಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಅಪ್ಡೇಟ್ ಆಗದಿದ್ದರೂ ಸಹ ವಿಂಡೋಸ್ 7 ನಲ್ಲಿ ಗೂಗಲ್ ಕ್ರೋಮ್ ಅನ್ನು ಬಳಸಲು ಅಡ್ಡಿಯಾಗುವುದಿಲ್ಲ ಎಂದು ಕೆಲವರು ಹೇಳುತ್ತಿದ್ದರಾದರೂ ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮೈಕ್ರೋಸಾಫ್ಟ್, ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಅನ್ನು 2009 ರಲ್ಲಿ ಬಿಡುಗಡೆ ಮಾಡಿದ್ದು, 2020ರಲ್ಲಿ ಇದಕ್ಕೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಿತ್ತು. ಅತ್ಯಂತ ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ಆದ ವಿಂಡೋಸ್ 7 ಅನ್ನು 100 ಮಿಲಿಯನ್ ಗೂ ಅಧಿಕ ಬಳಕೆದಾರರು ವಿಶ್ವದಾದ್ಯಂತ ಬಳಸುತ್ತಿದ್ದರು ಎನ್ನಲಾಗಿದೆ.

ಮತ್ತೊಂದು ಮಹತ್ವದ ಸಂಗತಿ ಎಂದರೆ ಈ 100 ಮಿಲಿಯನ್ ಬಳಕೆದಾರರಲ್ಲಿ ಪೈರೆಟೆಡ್ ವರ್ಷನ್ ಬಳಸುತ್ತಿರುವವರು ಸೇರಿಲ್ಲ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸುವ ಬಹುತೇಕರು ಗೂಗಲ್ ಕ್ರೋಮ್ ಅನ್ನು ಬ್ರೌಸಿಂಗ್ ಗಾಗಿ ಬಳಸುತ್ತಿದ್ದು, ಇದೀಗ ವಿಂಡೋಸ್ 7 ಹಾಗೂ ವಿಂಡೋಸ್ 8.1 ಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಿದರೆ ಮತ್ತೊಂದು ಬ್ರೌಸರ್ ಗೆ ಮೊರೆ ಹೋಗಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...