ಈಗ ಎಲ್ಲವೂ ಆನ್ಲೈನ್ ನಲ್ಲಿ ಆಗ್ತಿದೆ. ಕಚೇರಿ ಸಭೆಗಳಿಂದ ಹಿಡಿದು ಶಾಲೆ ಶಿಕ್ಷಣ ಸೇರಿದಂತೆ ಸಂಬಂಧಿಕರು, ಸ್ನೇಹಿತರ ಮಾತುಕತೆ ಕೂಡ ಆನ್ಲೈನ್ ಮೂಲಕ ನಡೆಯುತ್ತಿದೆ. ಅನೇಕರು ಮೀಟಿಂಗ್ ಗೆ ಗೂಗಲ್ ಮೀಟ್ ಬಳಸ್ತಿದ್ದಾರೆ. ಗೂಗಲ್ ಮೀಟ್ ಬಳಕೆದಾರರಿಗೆ ಕಂಪನಿ ಖುಷಿ ಸುದ್ದಿ ನೀಡಿದೆ.
ಗೂಗಲ್ ಮೀಟ್ ಬಳಕೆದಾರರು ಈಗ ಒಂದೇ ಬಾರಿ 25 ಜನರನ್ನು ಒಟ್ಟಿಗೆ ಸೇರಿಸಬಹುದಾಗಿದೆ. ಈ ವೈಶಿಷ್ಟ್ಯದ ಅಡಿಯಲ್ಲಿ, ಯಾರು ತಮ್ಮ ಪರದೆಯನ್ನು ಹಂಚಿಕೊಳ್ಳಬಹುದು, ಚಾಟ್ ಸಂದೇಶಗಳನ್ನು ಕಳುಹಿಸಬಹುದು, ಎಲ್ಲ ಬಳಕೆದಾರರನ್ನು ಮ್ಯೂಟ್ ಮಾಡಬಹುದು ಮತ್ತು ಸಭೆಗಳನ್ನು ಕೊನೆಗೊಳಿಸಬಹುದು ಎಂಬುದನ್ನು ಮಿತಿಗೊಳಿಸಲು ಸಾಧ್ಯವಾಗುತ್ತದೆ.
ಇನ್ಮುಂದೆ ಮೀಟಿಂಗ್ ಗೆ 25 ಮಂದಿಯನ್ನು ಆಹ್ವಾನಿಸಬಹುದು. ಮೊದಲು ಈ ಅವಕಾಶ ಎಜ್ಯುಕೇಷನ್ ವಿಭಾಗಕ್ಕೆ ಮಾತ್ರ ಲಭ್ಯವಿತ್ತು. ಈಗ ಎಲ್ಲ ಬಳಕೆದಾರರಿಗೂ ಲಭ್ಯವಿದೆ. ಡೆಸ್ಕ್ ಟಾಪ್ ಹಾಗೂ ಮೊಬೈಲ್ ಎರಡರಲ್ಲೂ ಈ ವೈಶಿಷ್ಟ್ಯ ಲಭ್ಯವಿದೆ. ಮೀಟಿಂಗ್ ವೇಳೆ ಗಮನ ಸೆಳೆಯಲು ಎಲ್ಲ ಅವಕಾಶಗಳನ್ನು ನೀಡಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಗೂಗಲ್ ಮೀಟ್, ಆರಂಭದಿಂದಲೂ ಅನೇಕ ನವೀಕರಣಗಳನ್ನು ಮಾಡ್ತ ಬಂದಿದೆ.