alex Certify ಕ್ಯಾನ್ಸರ್​ ಪೀಡಿತ ತಾಯಿಯನ್ನು ನೋಡಲು ಹೋದ ಉದ್ಯೋಗಿಯನ್ನು ವಜಾಗೊಳಿಸಿದ ಗೂಗಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್​ ಪೀಡಿತ ತಾಯಿಯನ್ನು ನೋಡಲು ಹೋದ ಉದ್ಯೋಗಿಯನ್ನು ವಜಾಗೊಳಿಸಿದ ಗೂಗಲ್

ನವದೆಹಲಿ: ಕಳೆದ ಕೆಲವು ದಿನಗಳಿಂದ ಟೆಕ್​ ದೈತ್ಯ ಗೂಗಲ್ ಸಂಸ್ಥೆ ಸಹಸ್ರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಇದೀಗ ಗೂಗಲ್‌ನಲ್ಲಿ ವೀಡಿಯೊ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಪಾಲ್ ಬೇಕರ್ ಅವರನ್ನೂ ಕೆಲಸದಿಂದ ವಜಾ ಮಾಡಿದ್ದು, ಅದೀಗ ವೈರಲ್​ ಆಗಿದೆ.

ಪಾಲ್​ ಬೇಕರ್​ ಅವರು ಕ್ಯಾನ್ಸರ್​ ಪೀಡಿತರಾಗಿರುವ ತಮ್ಮ ತಾಯಿಯ ಆರೈಕೆಗೆಂದು ರಜೆಯ ಮೇಲೆ ಹೋಗಿದ್ದಾಗ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮನೆಯಲ್ಲಿರುವ ಲ್ಯಾಪ್‌ಟಾಪ್‌ ಆನ್​ ಮಾಡಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ನಂತರ ವಿಚಾರಿಸಿದಾಗ ಕೆಲಸದಿಂದ ತಮ್ಮನ್ನು ವಜಾ ಮಾಡಿರುವುದು ತಿಳಿದಿದೆ. ಹಠಾತ್ ವಜಾಗೊಳಿಸುವಿಕೆಯು ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುವ ಹತ್ತಾರು ಕಥೆಗಳನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

ಇದೇ ರೀತಿ ಗೂಗಲ್​, ಹೆರಿಗೆಯಾದ ಬಳಿಕ ಆಸ್ಪತ್ರೆಯಲ್ಲಿದ್ದಾಗಲೇ ಮಹಿಳೆಯೊಬ್ಬರನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಬೇಕರ್​ ಬರೆದಿದ್ದಾರೆ. ನಾನು ನನ್ನ ಸಹೊದ್ಯೋಗಿಗಳನ್ನು ವಿಚಾರಿಸಿದಾಗ 12 ಸಾವಿರ ಮಂದಿಯನ್ನು ಸೇವೆಯಿಂದ ವಜಾ ಮಾಡಿರುವುದು ತಿಳಿದಿದೆ. ಇದು ಎಲ್ಲರ ಜೀವನದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂದು ದುಃಖದಿಂದ ಅವರು ಬರೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...