alex Certify ಗೂಗಲ್ ಉದ್ಯೋಗಿಗಳಿಗೆ ಶುಭ ಸುದ್ದಿ: ವರ್ಕ್ ಫ್ರಮ್ ಹೋಮ್ ವಿಸ್ತರಿಸಿದ ಟೆಕ್ ದೈತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್ ಉದ್ಯೋಗಿಗಳಿಗೆ ಶುಭ ಸುದ್ದಿ: ವರ್ಕ್ ಫ್ರಮ್ ಹೋಮ್ ವಿಸ್ತರಿಸಿದ ಟೆಕ್ ದೈತ್ಯ

Google Extends Work From Home Option for its Employees Till January 10 Next Year

ದೆಹಲಿ: ಕೋವಿಡ್- 19 ಸಾಂಕ್ರಾಮಿಕ ರೋಗದ ಮೂರನೆ ಅಲೆ ಭೀತಿ ಇರುವುದರಿಂದ ಗೂಗಲ್ ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿದೆ.

ಇಂಟರ್ನೆಟ್ ದೈತ್ಯ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಇಮೇಲ್ ಮೂಲಕ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು 2020ರ ಜನವರಿ 10ರ ವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದ್ದಾರೆ. ವಿಶ್ವದಾದ್ಯಂತ ಪ್ರಸ್ತುತ ಕೋವಿಡ್-19 ಪರಿಸ್ಥಿತಿಗಳು ಎಷ್ಟು ಬದಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಗೆಳತಿಯೊಂದಿಗಿದ್ದ ಪತಿಯನ್ನು ರೆಡ್‌ ಹ್ಯಾಂಡಾಗಿ ಹಿಡಿದ ಪತ್ನಿ…! ಪರಸ್ತ್ರೀಗೆ ಬಿತ್ತು ಧರ್ಮದೇಟು

ಮುಂದಿನ ವರ್ಷ ಜನವರಿ 10ರ ನಂತರ ಗೂಗಲ್, ದೇಶಗಳು, ಪ್ರದೇಶಗಳ ಪರಿಸ್ಥಿತಿ ಆಧಾರದ ಮೇಲೆ ಮನೆಯಿಂದ ಮಾಡುವ ಕೆಲಸವನ್ನು ಯಾವಾಗ ಕೊನೆಗೊಳಿಸಬೇಕು ಎಂದು ನಿರ್ಧರಿಸುತ್ತದೆ. ಉದ್ಯೋಗಿಗಳು ಯಾವಾಗ ತಮ್ಮ ಆಫೀಸಿಗೆ ಮರಳಬೇಕು ಅನ್ನೋದನ್ನು ನಿರ್ಧರಿಸಲು ಸ್ಥಳೀಯ ಕಚೇರಿಗಳಿಗೆ ವಿವೇಚನೆ ನೀಡಲಾಗುವುದು ಎಂದು ಪಿಚೈ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಗೂಗಲ್ ಉದ್ಯೋಗಿಗಳು ತಮ್ಮ ಕಛೇರಿಗಳಿಗೆ ಹಿಂದಿರುಗುವ ಮೊದಲು 30 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...