alex Certify ಒಲಿಂಪಿಕ್​ ಸಂಭ್ರಮವನ್ನು ಈ ರೀತಿಯಲ್ಲಿ ಆಚರಿಸಿದೆ ʼಗೂಗಲ್ʼ​ ಡೂಡಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್​ ಸಂಭ್ರಮವನ್ನು ಈ ರೀತಿಯಲ್ಲಿ ಆಚರಿಸಿದೆ ʼಗೂಗಲ್ʼ​ ಡೂಡಲ್

ಟೋಕಿಯೋ ಒಲಿಂಪಿಕ್ಸ್​ನ್ನು ಸಂಭ್ರಮಿಸುವ ಸಲುವಾಗಿ ಗೂಗಲ್​ ಡೂಡಲ್​​​ ಆನಿಮೇಷನ್​ ಗೇಮ್​ಗಳನ್ನ ಲಾಂಚ್​ ಮಾಡಿದ್ದು ಇದಕ್ಕೆ ಡೂಡಲ್​ ಚಾಂಪಿಯನ್​ ದ್ವೀಪಗಳ ಗೇಮ್​ ಎಂದು ಹೆಸರಿಸಿದೆ. ಈ ಸಣ್ಣ ಆಟಗಳು ಒಲಿಂಪಿಕ್ಸ್​ ನಡೆಯಲಿರುವ ಆಟಗಳನ್ನೇ ಆಧರಿಸಿ ರಚಿಸಲಾಗಿದೆ. ಟೋಕಿಯೋ ಒಲಿಂಪಿಕ್​ನ 2ನೇ ದಿನವಾದ ಇಂದು ಡೂಡಲ್​ನಲ್ಲಿ ಹೊಸ ಗೇಮ್​ ಪರಿಚಯಿಸಲಾಗಿದೆ. ಶುಕ್ರವಾರ ಟೋಕಿಯೋ ಒಲಿಂಪಿಕ್ಸ್​ಗೆ ಚಾಲನೆ ದೊರಕಿತ್ತು.

ಈ ಆನಿಮೇಷನ್​ ಗೇಮ್ಸ್​ನ್ನು ಟೋಕಿಯೋ ಮೂಲದ ಆನಿಮೇಷನ್​ ಸ್ಟುಡಿಯೋವಾದ ಸ್ಟುಡಿಯೋ4 ಡಿಗ್ರಿ ಸೆಲ್ಸಿಯಸ್​ ರಚಿಸಿದೆ. ಡೂಡಲ್​ ಚಾಂಪಿಯನ್​ ಗೇಮ್​ನಲ್ಲಿ ಟೆನ್ನಿಸ್​, ಸ್ಕೇಟ್​ಬೋರ್ಡಿಂಗ್​, ಆರ್ಚರಿ, ರಗ್ಬಿ, ಈಜು, ಕ್ಲೈಂಬಿಂಗ್​ ಹಾಗೂ ಮ್ಯಾರಥಾನ್​ಗಳು ಇವೆ.

ಇಂದಿನ ಡೂಡಲ್​ ಮೇಲೆ ನೀವು ಕ್ಲಿಕ್​ ಮಾಡಿದರೆ, ಅದು ನಿಮ್ಮನ್ನ ಡೂಡಲ್​ ಚ್ಯಾಂಪಿಯನ್ ಆಟಕ್ಕೆ ಕರೆದೊಯ್ಯುತ್ತದೆ. ಇಲ್ಲಿ ನೀವು ಯಾವ ತಂಡದಲ್ಲಿ ಆಡಬಯಸುತ್ತೀರಾ ಅನ್ನೋದನ್ನ ಆಯ್ಕೆ ಮಾಡಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...