
ಮೇ ತಿಂಗಳಲ್ಲಿ ಹಮ್ಮಿಕೊಂಡಿದ್ದ ತನ್ನ ಆಂತರಿಕ ಸಭೆಯೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಗೂಗಲ್, ಜಗತ್ತಿನಲ್ಲಿ ಮೂರು ಶತಕೋಟಿಯಷ್ಟು ಆಂಡ್ರಾಯ್ಡ್ ಡಿವೈಸ್‌ಗಳಿದ್ದು, ಪ್ರತಿನಿತ್ಯ ಅನೇಕ ಅಪ್ಲಿಕೇಶನ್‌ಗಳು ಬರುತ್ತಿವೆ ಹಾಗೂ ಇವುಗಳಲ್ಲಿ ಕೆಲವು ಅಪಾಯಕಾರಿಯಾಗಿವೆ ಎಂದು ತಿಳಿಸಿತ್ತು.
ಸೆಕ್ಯೂರಿಟಿ ಕಂಪನಿ ಟ್ರೆಂಡ್ ಮೈಕ್ರೋ ನೆರವಿನಿಂದ ಈ ನಕಲಿ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿ ಪ್ಲೇ ಸ್ಟೋರ್‌ನಿಂದ ಕಿತ್ತೊಗೆಯಲಾಗಿದೆ.
ದುಡ್ಡು ಸಂಪಾದನೆ ಹಾಗೂ ಇತರೆ ಆಮಿಷಗಳನ್ನು ಬಳಕೆದಾರರಿಗೆ ಒಡ್ಡುವ ಮೂಲಕ ಅವರನ್ನು ಜಾಹೀರಾತುಗಳನ್ನು ವೀಕ್ಷಿಸಲು ಪ್ರೇರೇಪಿಸುತ್ತಿದ್ದ ಎಥೆರಿಯಂ ಹೆಸರಿನ ಪೂಲ್ ಮೈನಿಂಗ್ ಕ್ಲೌಡ್ ಅಪ್ಲಿಕೇಶನ್ ಈ ಎಂಟು ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ ಎಂದು ಟ್ರೆಂಡ್ ಮೈಕ್ರೋ ತಿಳಿಸಿದೆ. ತಮ್ಮ ಸ್ನೇಹಿತರಿಗೆ ಹಾಗೂ ಕಾಂಟಾಕ್ಟ್‌ಗಳಿಗೆ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಶಿಫಾರಸು ಮಾಡಲು ಸಹ ಈ ಅಪ್ಲಿಕೇಶನ್‌ಗಳು ಕೇಳುತ್ತಿದ್ದವು.
ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ
’ಕ್ರಿಪ್ಟೋ ಕರೆನ್ಸಿ ಮೈನಿಂಗ್ ಕ್ಷಮತೆ’ ವರ್ಧನೆ ಮಾಡಿಕೊಳ್ಳುವುದನ್ನು ಹೇಳಿಕೊಡುವುದಾಗಿ ತಿಳಿಸಿದ ಕೆಲವೊಂದು ಅಪ್ಲಿಕೇಶನ್‌ಗಳು ಇದಕ್ಕಾಗಿ $14.99 (1095 ರೂ.) ನಿಂದ $189.99 (13,780 ರೂ.) ವರೆಗೂ ಚಾರ್ಜ್ ಮಾಡುತ್ತಿದ್ದವು.
ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಕೂಡಲೇ ಈ ಅಪ್ಲಿಕೇಶನ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಬೇಕೆಂದು ಟ್ರೆಂಡ್ ಮೈಕ್ರೋ ಮನವಿ ಮಾಡಿಕೊಂಡಿದೆ.
ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಬಳಸುವಾಗ ಸೇಫ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳಬಹುದಾಗಿದೆ.
1. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡುವ ಮುನ್ನ ರಿವ್ಯೂವ್ಸ್ ಓದುವುದು.
2. ಅಪ್ಲಿಕೇಶನ್‌ನ ಅಸಲಿಯತ್ತು ಪರೀಕ್ಷಿಸಿಕೊಳ್ಳಲು ಯಾವುದಾದರೊಂದು ಕ್ರಿಪ್ಟೋಕರೆನ್ಸಿಯ ವಿಳಾಸ ಎಂಟರ್ ಮಾಡಿ ನೋಡುವುದು.
3. ಕಡಿಮೆ ಟ್ರಾನ್ಸಫರ್ ಶುಲ್ಕದ ಆಫರ್ ನೀಡುವ ಯಾವುದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವಾಗ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು.