alex Certify 2 ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ; ಹಳಿ ತಪ್ಪಿದ ಬೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ; ಹಳಿ ತಪ್ಪಿದ ಬೋಗಿ

ಉತ್ತರಪ್ರದೇಶದ ಸುಲ್ತಾನ್‌ಪುರ ಜಂಕ್ಷನ್ ಬಳಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿರೋ ಘಟನೆ ನಡೆದಿದೆ.

ಅಪಘಾತದಲ್ಲಿ ರೈಲಿನ ಪೈಲಟ್ ಗಾಯಗೊಂಡಿದ್ದು, ಆರು ಬೋಗಿಗಳು ಹಳಿತಪ್ಪಿವೆ. ಐಎಎನ್‌ಎಸ್‌ನ ಮೂಲಗಳ ಪ್ರಕಾರ, ಎರಡೂ ಸರಕು ರೈಲುಗಳ ಎಂಜಿನ್‌ಗಳು ಹಾನಿಗೊಳಗಾಗಿವೆ.‌

ಈ ಘಟನೆಯ ನಂತರ, ಲಕ್ನೋ ಮತ್ತು ವಾರಣಾಸಿ ಮತ್ತು ಅಯೋಧ್ಯೆ-ಪ್ರಯಾಗರಾಜ್ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಾಹಿತಿಯ ಪ್ರಕಾರ, ಸುಲ್ತಾನ್‌ಪುರ ಜಂಕ್ಷನ್‌ನ ದಕ್ಷಿಣ ಕ್ಯಾಬಿನ್ ಬಳಿ ಒಂದೇ ಹಳಿಯಲ್ಲಿ ಎರಡು ಸರಕು ರೈಲುಗಳು ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ.

ರೈಲ್ವೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಹಳಿ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...