ಉತ್ತರಪ್ರದೇಶದ ಸುಲ್ತಾನ್ಪುರ ಜಂಕ್ಷನ್ ಬಳಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿರೋ ಘಟನೆ ನಡೆದಿದೆ.
ಅಪಘಾತದಲ್ಲಿ ರೈಲಿನ ಪೈಲಟ್ ಗಾಯಗೊಂಡಿದ್ದು, ಆರು ಬೋಗಿಗಳು ಹಳಿತಪ್ಪಿವೆ. ಐಎಎನ್ಎಸ್ನ ಮೂಲಗಳ ಪ್ರಕಾರ, ಎರಡೂ ಸರಕು ರೈಲುಗಳ ಎಂಜಿನ್ಗಳು ಹಾನಿಗೊಳಗಾಗಿವೆ.
ಈ ಘಟನೆಯ ನಂತರ, ಲಕ್ನೋ ಮತ್ತು ವಾರಣಾಸಿ ಮತ್ತು ಅಯೋಧ್ಯೆ-ಪ್ರಯಾಗರಾಜ್ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಾಹಿತಿಯ ಪ್ರಕಾರ, ಸುಲ್ತಾನ್ಪುರ ಜಂಕ್ಷನ್ನ ದಕ್ಷಿಣ ಕ್ಯಾಬಿನ್ ಬಳಿ ಒಂದೇ ಹಳಿಯಲ್ಲಿ ಎರಡು ಸರಕು ರೈಲುಗಳು ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ.
ರೈಲ್ವೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಹಳಿ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.