alex Certify ಮನುಷ್ಯನ ದೇಹಕ್ಕೆ ಉತ್ತಮ ಮೊಳಕೆ ಕಾಳು ಸೇವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯನ ದೇಹಕ್ಕೆ ಉತ್ತಮ ಮೊಳಕೆ ಕಾಳು ಸೇವನೆ

ಮೊಳಕೆಕಾಳಿನಲ್ಲಿ ಹಲವು ರೋಗನಿರೋಧಕ ಶಕ್ತಿಗಳಿವೆ. ಮೊಳಕೆಕಾಳಿನಲ್ಲಿ ಹಲವು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಇವೆ. ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆ ಕಾಳು ಇನ್ನು ಉತ್ತಮ. ಹೇಗೆ ಅಂತೀರಾ ಇಲ್ಲಿದೆ ನೋಡಿ.

* ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ.

* ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ. ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ.

* ತೂಕ ಇಳಿಸಲು ಡಯಟ್ ಮಾಡುವವರ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು. ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದಾಗಿ ಆಗಾಗ ತಿನ್ನಬೇಕಾಗುವುದಿಲ್ಲ, ನಾಲಿಗೆ ಮೇಲೂ ಕಡಿವಾಣ ಹಾಕಬಹುದು.

* ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿಯಿದೆ. ಅಂತೆಯೇ ಇದರಲ್ಲಿ ವಿಟಮಿನ್ ಎ ಅಂಶವೂ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...