alex Certify 3ನೇ ಅಲೆ ಆತಂಕದ ನಡುವೆ ಸಿಕ್ಕಿದೆ ಒಂದು ʼಗುಡ್ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3ನೇ ಅಲೆ ಆತಂಕದ ನಡುವೆ ಸಿಕ್ಕಿದೆ ಒಂದು ʼಗುಡ್ ನ್ಯೂಸ್ʼ

ಕೊರೊನಾ ವೈರಸ್ ಮೂರನೇ ಅಲೆ ಬಗ್ಗೆ ಈಗಾಗಲೇ ಭಯ ಹುಟ್ಟಿದೆ. ಮೂರನೇ ಅಲೆ ಮಕ್ಕಳನ್ನು ಕಾಡಬಹುದು ಎನ್ನಲಾಗ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತದಲ್ಲಿ ಇನ್ನೂ ಲಸಿಕೆ ಕಂಡು ಹಿಡಿಯಲಾಗಿಲ್ಲ. ಈ ಮಧ್ಯೆ ಲಸಿಕೆ ಬಗ್ಗೆ ಖುಷಿ ಸುದ್ದಿ ಸಿಕ್ಕಿದೆ. Zydus Cadila ಲಸಿಕೆಗೆ ಶೀಘ್ರವೇ ಅನುಮೋದನೆ ಸಿಗಲಿದೆ.

ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಈಗಾಗಲೇ ಶುರುವಾಗಿದೆ. ಇದು ಕೂಡ ಶೀಘ್ರವೇ ಪೂರ್ಣಗೊಳ್ಳಲಿದೆ ಎನ್ನಲಾಗ್ತಿದೆ. Zydus Cadila ಲಸಿಕೆ ಪರೀಕ್ಷೆ ಈಗಾಗಲೇ ನಡೆದಿದೆ. ಮುಂದಿನ ಎರಡು ವಾರಗಳಲ್ಲಿ ಪರವಾನಗಿ ಸಿಗಬಹುದೆಂಬ ನಿರೀಕ್ಷೆಯಿದೆ. ಕ್ಯಾಡಿಲಾ ಲಸಿಕೆಯ ಮೂರನೇ ಹಂತದ ಪ್ರಯೋಗಗಳು ಪೂರ್ಣಗೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಯೋಗವು 12-18 ವರ್ಷದೊಳಗಿನ 800-100 ಮಕ್ಕಳ ಮೇಲೆ ನಡೆದಿದೆ. ಈ ಲಸಿಕೆಯನ್ನು 12-18 ವರ್ಷದ ಮಕ್ಕಳಿಗೆ ಅನುಮೋದಿಸುವ ಸಾಧ್ಯತೆಯಿದೆ.

ಪ್ರಾಯೋಗಿಕ ಅಂಕಿ-ಅಂಶದ ಆಧಾರದ ಮೇಲೆ ತಜ್ಞರ ಗುಂಪು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಎಲ್ಲವೂ ಸರಿಯಾದಲ್ಲಿ ಲಸಿಕೆ ಈ ತಿಂಗಳು ಸಿಗಲಿದೆ. ಕ್ಯಾಡಿಲಾ ಅವರ ಲಸಿಕೆ 3 ಪ್ರಮಾಣಗಳೊಂದಿಗೆ ಇರುತ್ತದೆ

ಕ್ಯಾಡಿಲಾ ಲಸಿಕೆ ಮೂರು-ಡೋಸ್ ಲಸಿಕೆ. ಇದು ಚರ್ಮಕ್ಕೆ ನೀಡುವ ಇಂಟ್ರಾಡರ್ಮಲ್ ಲಸಿಕೆ. ಇದನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುವುದಿಲ್ಲ. ಮುಂದಿನ ಹಂತದಲ್ಲಿ ಕ್ಯಾಡಿಲಾವನ್ನು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರೀಕ್ಷಿಸಲಾಗುವುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...