alex Certify ‘SC’ ಸಮುದಾಯದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಹೊಲಿಗೆ, ವಿಡಿಯೋಗ್ರಫಿ, ಜಿಮ್ ತರಬೇತಿಗಾಗಿ ಅರ್ಜಿ ಆಹ್ವಾನ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘SC’ ಸಮುದಾಯದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಹೊಲಿಗೆ, ವಿಡಿಯೋಗ್ರಫಿ, ಜಿಮ್ ತರಬೇತಿಗಾಗಿ ಅರ್ಜಿ ಆಹ್ವಾನ.!

ಬೆಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಹೊಲಿಗೆ ತರಬೇತಿ, ವಿಡಿಯೋಗ್ರಫಿ ತರಬೇತಿ ಮತ್ತು ಜಿಮ್/ಫಿಟ್ನೆಸ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಪರಿಶಿಷ್ಟ ಜಾತಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೊಲಿಗೆ ತರಬೇತಿ ಶಿಬಿರಕ್ಕೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ (ಪಾಸ್/ಫೇಲ್) 18 ರಿಂದ 40 ವಯಸ್ಸಿನ ಆಸಕ್ತರಿಗೆ ನ. 28 ರಿಂದ ಡಿ. 17 ರ ವರೆಗೆ ಹಾಗೂ ವಿಡಿಯೋಗ್ರಫಿ ತರಬೇತಿ ಶಿಬಿರಕ್ಕೆ ದ್ವಿತೀಯ ಪಿಯುಸಿ (ಪಾಸ್/ಫೇಲ್) ವಿದ್ಯಾರ್ಹತೆ ಪಡೆದ 18 ರಿಂದ 40 ವರ್ಷ ವಯಸ್ಸಿನವರಿಗೆ ಡಿ. 06 ರಿಂದ ಡಿ. 17 ರ ವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ನಡೆಯಲ್ಲಿದ್ದು, ಜಿಮ್/ಫಿಟ್ನೆಸ್ ತರಬೇತಿ ಶಿಬಿರಕ್ಕೆ ದ್ವಿತೀಯ ಪಿಯುಸಿ (ಪಾಸ್/ಫೇಲ್) ವಿದ್ಯಾರ್ಹತೆ ಪಡೆದ 18 ರಿಂದ 40 ವರ್ಷ ವಯಸ್ಸಿನವರಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ನಡೆಯಲಿದೆ.

ಆಸಕ್ತ ಯುವಕ/ಯುವತಿಯರು ನವ್ಹೆಂಬರ್ 25ರ ಒಳಗಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಹಾಯಕ ನಿರ್ದೇಶಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಭವನ, 1ನೇ ಮಹಡಿ, ಕೊಠಡಿ ಸಂ: 112 ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ಇಲ್ಲಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 9632778567 & 080-29787443 ಗೆ ಸಂಪರ್ಕಿಸಬಹುದು ಎಂದು ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...