ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆದಾರರು ಕೊಂಚ ನಿರಾಳರಾಗುವ ಸುದ್ದಿ ನೀಡಿದೆ. 15 ಸಿಎ ಮತ್ತು 15 ಸಿಬಿ ಫಾರ್ಮ್‌ಗಳ ಎಲೆಕ್ಟ್ರಾನಿಕ್ ಫೈಲಿಂಗ್ ಮಾಡಲು ಅವಕಾಶ ವಿಸ್ತರಿಸಿದೆ.
Www.incometax.gov.in ಪೋರ್ಟಲ್‌ನಲ್ಲಿ ಆದಾಯ ತೆರಿಗೆ ಫಾರ್ಮ್‌ಗಳು 15ಸಿಎ/ 15ಸಿಬಿಯನ್ನು ಎಲೆಕ್ಟ್ರಾನಿಕ್ ಫೈಲಿಂಗ್ ಮಾಡಲು ತೊಂದರೆ ಗಮನದಲ್ಲಿಟ್ಟುಕೊಂಡು, ಹಸ್ತಚಾಲಿತ ಸ್ವರೂಪದಲ್ಲಿ ಸಲ್ಲಿಸಬಹುದು ಎಂದು ಈ ಹಿಂದೆ ಸಿಬಿಡಿಟಿ ನಿರ್ಧರಿಸಿತು. ಜತೆಗೆ ಜುಲೈ 15ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಕಾಲಾವಕಾಶವನ್ನು ಆಗಸ್ಟ್ 15ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ಫಾರ್ಮ್‌ಗಳು 15 ಸಿಎ ಮತ್ತು 15 ಸಿಬಿಯನ್ನು ವಿದ್ಯುನ್ಮಾನವಾಗಿ ಒದಗಿಸುವ ಅವಶ್ಯಕತೆಯಿದೆ. ಆದರೆ ತೆರಿಗೆದಾರರು ಈಗ ಆಗಸ್ಟ್ 15ರವರೆಗೆ ಅಧಿಕೃತ ವಿತರಕರಿಗೆ ಈ ಫಾರ್ಮ್‌ಗಳನ್ನು ಹಸ್ತಚಾಲಿತ ರೂಪದಲ್ಲಿ ಸಲ್ಲಿಸಬಹುದು.