
ಬೆಳಗಾವಿ : ರಾಜ್ಯದ 8-10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಾಹ್ಯಾಕಾಶ ಜಗತ್ತಿನ ದರ್ಶನಕ್ಕೆ ʻಟೆಲಿಸ್ಕೋಪ್ʼ ವಿತರಣೆ ಮಾಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಎಲ್ಲರಿಗೂ ವಿಜ್ಞಾನ’ ದ್ಯೇಯೋದ್ದೇಶದೊಂದಿಗೆ ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಕುತೂಹಲ ಹೆಚ್ಚಿಸಲು 8-10ನೇ ತರಗತಿ ವಿದ್ಯಾರ್ಥಿಗಳಿಗೆ ದೂರದರ್ಶಕ (ಟೆಲಿಸ್ಕೋಪ್)ಗಳನ್ನು ಒದಗಿಸುವ ಬಗ್ಗೆ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.