ಲಖನೌ: ಮುಂದಿನ ದಶಕದಲ್ಲಿ ಅಯೋಧ್ಯೆಯ ದೇಗುಲ ಪಟ್ಟಣವನ್ನು ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲ್ಯಾನ್ ಅನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮೋದಿಸಿದ್ದಾರೆ.
ಮಾಸ್ಟರ್ ಪ್ಲ್ಯಾನ್ 133.67 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಸುಮಾರು 12 ಲಕ್ಷ ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಜನರಿಂದ ಬಂದ 1,084 ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ನಂತರ ವಸತಿ ಮತ್ತು ನಗರ ಯೋಜನಾ ಇಲಾಖೆಯು ಮಾಸ್ಟರ್ ಪ್ಲ್ಯಾನ್ 2031 ಅನ್ನು ಮುಖ್ಯಮಂತ್ರಿಗಳು ಮಂಡಿಸಿದರು.
ವಸತಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ್ ಗೋಕರ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಅಯೋಧ್ಯೆ ಮಾಸ್ಟರ್ ಪ್ಲಾನ್‌ಗೆ ಶೀಘ್ರವಾಗಿ ಅನುಮೋದನೆ ನೀಡಲಾಗಿದೆ. ಫೈಜಾಬಾದ್/ಅಯೋಧ್ಯೆಯ ಅಭಿವೃದ್ಧಿಗೆ ಕೊನೆಯ ಮಾಸ್ಟರ್ ಪ್ಲ್ಯಾನ್ ಅನ್ನು 1983 ರಲ್ಲಿ ಸಿದ್ಧಪಡಿಸಲಾಗಿತ್ತು. ಅದರ ಅವಧಿ 2001 ರಲ್ಲಿ ಕೊನೆಗೊಂಡಿತ್ತು. ಯೋಗಿ ಸರ್ಕಾರವು ಇತರ ನಗರಗಳಿಗಿಂತ ಮೊದಲು ಅಯೋಧ್ಯೆ 2031 ಮಾಸ್ಟರ್ ಪ್ಲ್ಯಾನ್ ಅನ್ನು ಅನುಮೋದಿಸಿದೆ ಎಂದು ಹೇಳಿದರು.
ನಗರದಲ್ಲಿ ಸುಮಾರು 4,295 ಮನೆಗಳನ್ನು ಹೊಂದಿರುವ ಏಳು ಕೊಳೆಗೇರಿ ಬಡಾವಣೆಗಳನ್ನು ಪರಿವರ್ತಿಸಲು ಗಮನಹರಿಸುವ ಅಗತ್ಯವಿದೆ ಎಂದು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದ ತಜ್ಞರು ತಿಳಿಸಿದ್ದಾರೆ. 2031 ರ ವೇಳೆಗೆ ವಾರ್ಷಿಕವಾಗಿ ನಾಲ್ಕು ಕೋಟಿಗೂ ಹೆಚ್ಚು ಪ್ರವಾಸಿಗರು ನಗರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.