alex Certify GOOD NEWS : ಗಣೇಶ ಚತುರ್ಥಿ ಹಬ್ಬಕ್ಕೆ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ಗಣೇಶ ಚತುರ್ಥಿ ಹಬ್ಬಕ್ಕೆ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು : ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಗಣೇಶ ಚತುರ್ಥಿ ಪ್ರಯುಕ್ತ ಯಶವಂತಪುರ ಬೆಳಗಾವಿ ನಡುವೆ ವಿಶೇಷ ರೈಲು ಸಂಚರಿಸಲಿದೆ.

ಯಶವಂತಪುರ-ಬೆಳಗಾವಿ ಮಧ್ಯ 07389 ಸಂಖ್ಯೆಯ ರೈಲು ಸೆಪ್ಟೆಂಬರ್ 15 ರಂದು ಸಂಜೆ 6.15 ಕ್ಕೆ ಯಶವಂತಪುರದಿಂದ ಹೊರಟು ಸೆಪ್ಟೆಂಬರ್ 16 ರಂದು ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ. ಬೆಳಗಾವಿ-ಯಶವಂತಪುರ 07390 ಸಂಖ್ಯೆಯ ರೈಲು ಸೆಪ್ಟೆಂಬರ್ 16ರಂದು ಸಂಜೆ 5.30 ಕ್ಕೆ ಬೆಳಗಾವಿಯಿಂದ ಹೊರಡಲಿದೆ ಮತ್ತು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 4.30 ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 07391 ಸೆಪ್ಟೆಂಬರ್ 17 ರಂದು ಸಂಜೆ 6.15 ಕ್ಕೆ ಯಶವಂತಪುರದಿಂದ ಹೊರಟು ಸೆಪ್ಟೆಂಬರ್ 18 ರಂದು ಬೆಳಿಗ್ಗೆ 6 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ. ರೈಲು ಸಂಖ್ಯೆ 07392 ಸೆಪ್ಟೆಂಬರ್ 18 ರಂದು ಸಂಜೆ 5.30 ಕ್ಕೆ ಬೆಳಗಾವಿಯಿಂದ ಹೊರಟು 19 ರಂದು ಬೆಳಿಗ್ಗೆ 4.30 ಕ್ಕೆ ಯಶವಂತಪುರ ತಲುಪಲಿದೆ ಎಂದು ಮೂಲಗಳು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...