ಕೋವಿಡ್ ಸಾಂಕ್ರಮಿಕದ ಕಾರಣದಿಂದ ವಾಹನ ಸಂಚಾರ ನಿರ್ಬಂಧಗೊಂಡಿರುವ ಕಾರಣ ಹಾಗೂ ತನ್ನ ಸರ್ವಿಸ್ ಕೇಂದ್ರಗಳು ಕೆಲಸ ಮಾಡದೇ ಇದ್ದಿದ್ದರಿಂದಾಗಿ ಆಟೋಮೊಬೈಲ್ ದಿಗ್ಗಜ ಮಾರುತಿ ಸುಜ಼ುಕಿ ತನ್ನ ಗ್ರಾಹಕರಿಗೆ ಉಚಿತ ಸರ್ವಿಸ್‌ನ ವಾರಂಟಿಯನ್ನು ವಿಸ್ತರಿಸಿದೆ.
ವೇಶ್ಯಾವಾಟಿಕೆಗೆ ಬಾಲಕಿ ಬಳಕೆ, 7 ಮಂದಿಯಿಂದ ನಿರಂತರ ಅತ್ಯಾಚಾರ; ಗರ್ಭಿಣಿಯಾದ ನಂತರ ಪೊಲೀಸರಿಗೆ ದೂರು
ಮಾರ್ಚ್ 15, 2021 ಹಾಗೂ ಜೂನ್ 30, 2021ರ ನಡುವೆ ವಾರಂಟಿ ಅವಧಿ ಮುಕ್ತಾಯಗೊಂಡ ವಾಹನಗಳಿಗೆ ಮಾತ್ರವೇ ಈ ಡೆಡ್‌ಲೈನ್ ವಿಸ್ತರಣೆ ಅನ್ವಯಿಸಲಿದೆ. ಜುಲೈ 31, 2021ರವರೆಗೂ ವಾರಂಟಿಯ ಅವಧಿಯನ್ನು ವಿಸ್ತರಿಸಲಿದೆ.
ಕೋವಿಡ್ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
“ಸಾಂಕ್ರಮಿಕ ಕಾಲಘಟ್ಟದಲ್ಲಿ ನಿರ್ಬಂಧಿತ ಚಾಲನೆ ಇರುವ ಕಾರಣ ನಮ್ಮ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಈ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್ ಸಡಿಲಿಸಿದ ಬಳಿಕ ಗ್ರಾಹಕರು ಈ ಸೇವೆಗಳ ಪ್ರಯೋಜನ ಪಡೆದುಕೊಳ್ಳಬಹುದು. ವರ್ಕ್‌ಶಾಪ್ ಭೇಟಿ ಮಾಡಲು ಸಾಧ್ಯವಾಗದ ಮಂದಿಗೆ ಪಿಕ್‌ಅಪ್ & ಡ್ರಾಪ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ” ಎಂದು ಮಾರುತಿ ಸುಜ಼ುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿದೇರ್ಶಕ (ಸರ್ವೀಸ್) ಪಾರ್ಥೋ ಬ್ಯಾನರ್ಜಿ ತಿಳಿಸಿದ್ದಾರೆ.