ಭಾರತೀಯ ರೈಲ್ವೇ ಹೊಸದಾಗಿ ಪರಿಚಯಿಸಲಿರುವ 3-ಟಯರ್ ಹವಾನಿಯಂತ್ರಿತ ಎಕನಾಮಿ ಕ್ಲಾಸ್ ಕೋಚ್‌ಗಳಲ್ಲಿ ಪ್ರಯಾಣದ ದರವು, ಚಾಲ್ತಿಯಲ್ಲಿರುವ ಇದೇ ದರ್ಜೆಯ 8% ಕಡಿಮೆ ಇರಲಿದೆ.
ಹೊಸ ಕೋಚ್‌ಗಳ ಪ್ರಯಾಣದ ದರವು ಚಾಲ್ತಿಯಲ್ಲಿರುವ ಸ್ಲೀಪರ್ ಕ್ಲಾಸ್ ಅಥವಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ 2.4 ಪಟ್ಟು ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಎಸಿ-3 ಟಯರ್‌ನ 50 ಬೋಗಿಗಳನ್ನು ವಿವಿಧ ರೈಲ್ವೇ ವಲಯಗಳಿಗೆ ಹಂಚಲಾಗುವುದು.
ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು
ಚಾಲ್ತಿಯಲ್ಲಿರುವ ಮೇಲ್/ಎಕ್ಸ್‌ಪ್ರೆಸ್ ರೈಲುಗಳಿಗೆ ಈ ಎಸಿ-3 ಟಯರ್‌ನ ಹೊಸ ಬೋಗಿಗಳನ್ನು ಅಂಟಿಸಲಿದ್ದು, ಕೆಲವೊಂದು ರೈಲುಗಳಲ್ಲಿ ಇದೇ ಬೋಗಿಗಳನ್ನು ಸ್ಲೀಪರ್ ಕೋಚ್‌ಗಳ ಬದಲಿಗೆ ಅಂಟಿಸಲಾಗುವುದು.
300 ಕಿಮೀ ವರೆಗೂ ಈ ರೈಲಿನ ಮೂಲ ದರವು 440 ರೂಪಾಯಿಗಳಷ್ಟಿರಲಿದೆ. 4,951 ಕಿಮೀ ನಿಂದ 5000 ಕಿಮೀವರೆಗೂ 3,065 ರೂಪಾಯಿಯ ಅತ್ಯಧಿಕ ದರವಿರಲಿದೆ.
ತಲಾ 83 ಬರ್ತ್‌ಗಳನ್ನು ಹೊಂದಿರುವ ಈ ಎಸಿ-3 ಟಿಯರ್ ಕೋಚ್‌ಗಳಲ್ಲಿನ ಪ್ರಯಾಣವು, ಸಾಮಾನ್ಯ ಎಸಿ-3 ಟಯರ್ ಕೋಚ್‌ಗಳಲ್ಲಿನ ಪ್ರಯಾಣಕ್ಕಿಂತ ಕಡಿಮೆ ಇರಲಿದೆ. ಸಾಮಾನ್ಯ ಎಸಿ-3 ಟಯರ್ ಬೋಗಿಗಳಲ್ಲಿ 72 ಬರ್ತ್‌ಗಳು ಇರಲಿವೆ. ಸಾಮಾನ್ಯ ಎಸಿ-3 ಟಯರ್ ಬೋಗಿಗಳ ಬರ್ತ್ ಒಂದರಲ್ಲಿ ಎರಡು ಬದಿ ಸೀಟುಗಳಿದ್ದು, ಹೊಸ ಬೋಗಿಗಳಲ್ಲಿ ಬರ್ತ್ ಒಂದರಲ್ಲಿ ಮೂರು ಸೀಟುಗಳಿರಲಿವೆ.
ಈ ವಿತ್ತೀಯ ವರ್ಷದಂಚಿನ ವೇಳೆಗೆ ಇಂಥ 806 ಬೋಗಿಗಳನ್ನು ಹಳಿಗೆ ಇಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.