ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ ತಿಳಿಸಿದ್ದು, ಇಂಥ ಹೂಡಿಕೆಗಳನ್ನು ಆದಾಯವೆಂದು ಪರಿಗಣಿಸಲು ಬರುವುದಿಲ್ಲವೆಂದು ತಿಳಿಸಿದೆ.
ಈ ಸಂಬಂಧ ಸಲ್ಲಿಸಲಾಗಿದ್ದ ವ್ಯಕ್ತಿಗತ ಮನವಿಯೊಂದನ್ನು ಆಲಿಸಿದ ನ್ಯಾಯಾಲಯದ ಆಗ್ರಾ ಪೀಠ, ತನ್ನ ಆದೇಶವು ಇಂಥದ್ದೇ ಮಿಕ್ಕೆಲ್ಲಾ ಪ್ರಕರಣಗಳಿಗೂ ಅನ್ವಯಿಸಲಿದೆ ಎಂದಿದೆ.
ಅರ್ಜಿದಾರರಾದ ಗ್ವಾಲಿಯರ್‌ನ ಉಮಾ ಅಗರ್ವಾಲ್ ಹೆಸರಿನ ಗೃಹಿಣಿಯೊಬ್ಬರು 2016-17ರ ವಿತ್ತೀಯ ವರ್ಷದಲ್ಲಿ ತಮ್ಮ ಆದಾಯವನ್ನು 1,30,810 ರೂಪಾಯಿ ಎಂದು ಘೋಷಿಸಿಕೊಂಡಿದ್ದರು. ಆದರೆ ಅಪನಗದೀಕರಣದ ಬಳಿಕ ತಮ್ಮ ಖಾತೆಯಲ್ಲಿ ಉಮಾ 2,11,500 ರೂಪಾಯಿಗಳನ್ನು ಜಮೆ ಮಾಡಿದ್ದರು.
ಕಾಂಗ್ರೆಸ್ ಶಿಸ್ತು ಗೊತ್ತಿದ್ದವರು ಹೀಗೆಲ್ಲ ಮಾತಾಡಲ್ಲ, ಒಳಗೊಳಗೆ ಉರಿದುಕೊಂಡರೆ ನಾವೇನು ಮಾಡಲು ಸಾಧ್ಯ..?
ಇಷ್ಟು ಮೊತ್ತ ತಮ್ಮ ಖಾತೆಯಲ್ಲಿ ಹೇಗೆ ಬಂತು ಎಂದು ಇಲಾಖೆಯಿಂದ ಪ್ರಶ್ನೆ ಬಂದಾಗ, ತಮ್ಮ ಹಿಂದಿನ ಉಳಿತಾಯದೊಂದಿಗೆ ಪತಿ, ಮಗ ಹಾಗೂ ಸಂಬಂಧಿಕರು ಕೊಟ್ಟ ಒಂದಷ್ಟು ಹಣವನ್ನು ಸೇರಿಸಿಕೊಂಡು ಉಳಿತಾಯ ಮಾಡಿದ್ದಾಗಿ ಹೇಳಿದ ಉಮಾ ಅವರ ವಿವರಣೆಯನ್ನು ಸಿಐಟಿ (ಮೇಲ್ಮನವಿ) ಒಪ್ಪಿರಲಿಲ್ಲ. 2,11,500 ರೂಪಾಯಿಗಳನ್ನು ವಿವರಣೆ ಇಲ್ಲದ ದುಡ್ಡೆಂದು ಪರಿಗಣಿಸಲು ಸಿಐಟಿ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಉಮಾ ಐಟಿಎಟಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಮನೆಯೊಡತಿಯರು ತಮ್ಮ ಕುಟುಂಬಗಳಿಗೆ ನೀಡುವ ಕೊಡುಗೆಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದ ನ್ಯಾಯಾಲಯ, ಭಾರತದಲ್ಲಿನ ಮಹಿಳೆಯರು ತಮ್ಮ ಮುಖ್ಯ ಉದ್ಯೋಗವೇ ’ಮನೆ ನೋಡಿಕೊಳ್ಳುವುದು’ ಎಂದು 2011ರ ಜನಗಣತಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಕೊಟ್ಟಿದ್ದ ಆದೇಶವೊಂದನ್ನು ಉಲ್ಲೇಖಿಸುವ ಮೂಲಕ ಐಟಿಎಟಿ ಮಹತ್ವದ ಈ ತೀರ್ಪು ಕೊಟ್ಟಿದೆ.
ಆರ್ಡರ್ ಮಾಡದೆಯೇ ಮಹಿಳೆ ಮನೆಗೆ ಬಂತು ಅಮೆಜಾನ್ನ 150ಕ್ಕೂ ಅಧಿಕ ಪಾರ್ಸೆಲ್..!
“ದೇಶಾದ್ಯಂತ ಮಹಿಳೆಯರು ತಂತಮ್ಮ ಮನೆಯ ಬಜೆಟ್‌ಗಳಲ್ಲಿ, ತರಕಾರಿ ಮಾರುವವರು, ದರ್ಜಿಗಳು, ದಿನಸಿ ವ್ಯಾಪಾರಿಗಳು ಹಾಗೂ ಮಿಕ್ಕ ವರ್ತಕರ ಬಳಿ ಚೌಕಾಶಿ ಮಾಡಿಕೊಂಡು ಉಳಿತಾಯವಾದ ದುಡ್ಡನ್ನು ಕೂಡಿಸುತ್ತಿದ್ದಾರೆ”
“ವರ್ಷಗಳಿಂದಲೂ ಹಬ್ಬಗಳ ಸಂದರ್ಭದಲ್ಲಿ ತಮ್ಮ ಸಂಬಂಧಿಕರಿಂದ ಬರುವ ಉಡುಗೊರೆಗಳನ್ನು, ತಾವು ತೊಳೆಯುವ ಪ್ಯಾಂಟಿನ ಜೇಬುಗಳಲ್ಲಿ ಸಿಕ್ಕ ಸಣ್ಣಪುಟ್ಟ ಹಣವನ್ನೆಲ್ಲಾ ಸೇರಿಸಿಕೊಂಡು ಮಹಿಳೆಯರು ಉಳಿತಾಯ ಮಾಡುತ್ತಿದ್ದಾರೆ. ಆದರೆ 500 ರೂ. ಹಾಗೂ 1000 ರೂ. ನೋಟುಗಳ ಅಪನಗದೀಕರಣದ ಬಳಿಕ ಈ ಮಹಿಳೆಯರಿಗೆ ತಮ್ಮ ಸಣ್ಣಪುಟ್ಟ ಉಳಿತಾಯಗಳನ್ನೆಲ್ಲಾ ಬ್ಯಾಂಕುಗಳಲ್ಲಿ ಇಡದೇ ಬೇರೆ ಅವಕಾಶವೇ ಇಲ್ಲದಂತಾಗಿದೆ” ಎಂದು ಐಟಿಎಟಿ ತನ್ನ ಆದೇಶದಲ್ಲಿ ಹೈಲೈಟ್ ಮಾಡಿದೆ.
ನವೆಂಬರ್ 2016ರಲ್ಲಿ ನೋಟು ಅಪನಗದೀಕರಣಗೊಂಡ ಬೆನ್ನಲ್ಲೇ 2017ರ ಆರಂಭದಲ್ಲಿ ಈ ಬಗ್ಗೆ ಖುದ್ದು ಸ್ಪಷ್ಟನೆ ಕೊಟ್ಟಿದ್ದ ಆದಾಯ ತೆರಿಗೆ ಇಲಾಖೆ, 2.5 ಲಕ್ಷ ರೂ.ವರೆಗಿನ ಹೂಡಿಕೆಗಳ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲವೆಂದೂ ಮೇಲೆ ತೆರಿಗೆ ರಿಟರ್ನ್ಸ್ ಸಂಬಂಧ ದಾಖಲೆಗಳಲ್ಲಿ ಹೋಲಿಕೆ ಕಂಡು ಬರದೇ ಇರುವ ಖಾತೆಗಳ ಮೇಲೆ ಮಾತ್ರವೇ ತನಿಖೆ ನಡೆಸುವುದಾಗಿ ಹೇಳಿಕೊಂಡಿತ್ತು.