alex Certify ‘ಕ್ರಿಕೆಟ್ ಪ್ರೇಮಿ’ಗಳಿಗೆ ಗುಡ್ ನ್ಯೂಸ್ : T-20 ಪಂದ್ಯ ನಡೆಯುವ ದಿನದಂದು ಹೆಚ್ಚುವರಿ ‘BMTC’ ಬಸ್ ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕ್ರಿಕೆಟ್ ಪ್ರೇಮಿ’ಗಳಿಗೆ ಗುಡ್ ನ್ಯೂಸ್ : T-20 ಪಂದ್ಯ ನಡೆಯುವ ದಿನದಂದು ಹೆಚ್ಚುವರಿ ‘BMTC’ ಬಸ್ ಸಂಚಾರ

ಬೆಂಗಳೂರು : ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದ್ದು, ಟಿ20 ಪಂದ್ಯ ವೀಕ್ಷಿಸಲು ತೆರಳುವವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.

ಜನವರಿ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯಾ ಹಾಗೂ ಅಫ್ಘಾನಿಸ್ತಾನ ಟಿ20 ಹೊನಲು ಬೆಳಕಿನ ಪಂದ್ಯ ನಡೆಯಲಿದ್ದು, ಈ ಪಂದ್ಯ ವೀಕ್ಷಣೆಗೆ ತೆರಳುವ ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ಒದಗಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ, ಸರ್ಜಾಪುರ, , ಕೆಂಗೇರಿ, ನೆಲಮಂಗಲ, ಬಾಗಲೂರು, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.ಮಾರ್ಗಸಂಖ್ಯೆ ಎಸ್ಬಿಎಸ್ -1ಕೆ ಬಸ್ ಎಚ್ಎಎಲ್ ಮಾರ್ಗವಾಗಿ ಕಾಡುಕೋಡಿ ತಲುಪಲಿದೆ. ಎಸ್ಬಿಎಸ್-13ಕೆ ನಂಬರಿನ ಬಸ್ ಹೂಡಿ ಮಾರ್ಗವಾಗಿ ಕಾಡುಗೋಡಿ ಬಸ್ ನಿಲ್ದಾಣ ತಲುಪಲಿದೆ. ಜಿ-2 ಬಸ್ ಅಗರ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ, ಜಿ-3ಬಸ್ ಹೊಸೂರು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ, ಜಿ-4 ಜಯದೇವ ಆಸ್ಪತ್ರೆ ಮಾರ್ಗವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ತಲುಪಲಿದೆ. ಜಿ-11ರ ಬಸ್ ಹೆಣ್ಣೂರು ರಸ್ತೆ ಮೂಲಕ ಬಾಗಲೂರುವರೆಗೆ ಸಂಚರಿಸಲಿದ್ದು, ಕೆಎಚ್ಬಿ-12 ಎಚ್ಕೆ ಬಸ್ ಟಿನ್ ಫ್ಯಾಕ್ಟ್ರಿ ಮೂಲಕ ಹೊಸಕೋಟೆವರೆಗೂ ಸಂಚರಿಸಲಿದೆ.

ಜಿ-6 ಬಸ್ ಮೈಸೂರು ರಸ್ತೆ, ನಾಯಂಡಹಳ್ಳಿ ಮಾರ್ಗವಾಗಿ ಕೆಂಗೇರಿ ಕೆಎಚ್ಬಿ ಕ್ವಾಟ್ರಸ್ ತಲುಪಿದರೆ ಜಿ-7 ಬಸ್ ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್ಶಿಪ್ ಹಾಗೂ ಜಿ-8 ಬಸ್ ಯಶವಂತಪುರ ಮಾರ್ಗವಾಗಿ ನೆಲಮಂಗಲ ಸಂಚರಿಸಲಿದೆ. ಜಿ-9 ಬಸ್ ಹೆಬ್ಬಾಳ ಮಾರ್ಗವಾಗಿ ಯಲಹಂಕ 5ನೇ ಹಂತ, ಜಿ-10ರ ಬಸ್ ನಾಗವಾರ, ಟಾನರಿ ರಸ್ತೆ ಮೂಲಕ ಹೆಗಡೆನಗರ, ಯಲಹಂಕ ತಲುಪಲಿದೆ ಎಂದು ಬಿಎಂಟಿಸಿ ಪ್ರಕಟಣೆ ಹೊರಡಿಸಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...