ಅನೇಕರು ಹವ್ಯಾಸವನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಆದ್ರೆ ಬ್ಯುಸಿನೆಸ್ ನಂಬಿ, ಉದ್ಯೋಗ ಬಿಡಲು ಅನೇಕರು ಭಯಪಡ್ತಾರೆ. ಅಂತವರು ಕೆಲಸದ ಜೊತೆ ಲಾಭ ನೀಡಬಲ್ಲ, ಕಡಿಮೆ ಹೂಡಿಕೆಯ ಬ್ಯುಸಿನೆಸ್ ಶುರು ಮಾಡಿ, ಹೆಚ್ಚುವರಿ ಹಣ ಗಳಿಸಬಹುದು.
ಕೋಣೆ ಅಲಂಕಾರ, ಆಟಿಕೆಗಳು, ವಾಲ್ ಪೇಂಟಿಂಗ್ ಅಥವಾ ಫೆಸ್ಟಿವಲ್ ರಂಗೋಲಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಕಡಿಮೆ ಬಜೆಟ್‌ನಲ್ಲಿ ಈ ವ್ಯವಹಾರವನ್ನು ಆರಂಭಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.
ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು
ವಾಲ್ ಪೇಂಟಿಂಗ್ : ವಾಲ್ ಪೇಟಿಂಗ್ ಗೆ ಹೆಚ್ಚಿನ ಬೇಡಿಕೆಯಿದೆ. ಮನೆ ಹಾಗೂ ಕಚೇರಿ ಎರಡರಲ್ಲೂ ಇದನ್ನು ಇಷ್ಟಪಡುವ ಜನರಿದ್ದಾರೆ. ವಾಲ್ ಪೇಟಿಂಗ್ ನಲ್ಲಿ ಆಸಕ್ತಿಯಿದ್ದರೆ ನೀವು ಈ ವ್ಯವಹಾರ ಶುರು ಮಾಡಬಹುದು. ಸಾಮಾಜಿಕ ಮಾಧ್ಯಮಗಳ ಮೂಲಕ ಜಾಹೀರಾತು ನೀಡಬಹುದು. ಆನ್ಲೈನ್ ನಲ್ಲಿಯೇ ಮಾರಾಟ ಮಾಡಿ, ಹೆಚ್ಚು ಹಣ ಗಳಿಸಬಹುದು.
ಆಟಿಕೆ : ಸದಾ ಬೇಡಿಕೆಯಲ್ಲಿರುವ ವಸ್ತುಗಳಲ್ಲಿ ಆಟಿಕೆ ಕೂಡ ಒಂದು. ಮಕ್ಕಳ ಆಟಿಕೆಗೆ ಬೇಡಿಕೆ ಕಡಿಮೆಯಾಗುವುದಿಲ್ಲ. ಮನೆ ಅಲಂಕಾರಕ್ಕಾಗಿ ಆಟಿಕೆಗಳನ್ನು ಬಳಸುವವರಿದ್ದಾರೆ. ಕಡಿಮೆ ಬೆಲೆಗೆ ಈ ಬ್ಯುಸಿನೆಸ್ ಶುರು ಮಾಡಿ ನೀವು ಹಣ ಗಳಿಸಬಹುದು.
ದುರ್ಗಾ ಪೂಜೆ ಸಂದರ್ಭದಲ್ಲಿ ತುಂಬಿ ತುಳುಕಿದ ಕೋಲ್ಕತ್ತಾ ರೆಸ್ಟೋರೆಂಟ್ ಗಳು…!
ರಂಗೋಲಿ : ಮನೆಯಲ್ಲಿ ರಂಗೋಲಿ ಹಾಕುತ್ತ ಕುಳಿತುಕೊಳ್ಳಲು ಅನೇಕರಿಗೆ ಸಮಯವಿರುವುದಿಲ್ಲ. ಕೆಲವರಿಗೆ ರಂಗೋಲಿ ಹಾಕಲು ಬರುವುದಿಲ್ಲ. ಹಬ್ಬದ ದಿನಗಳಲ್ಲಿ ಮನೆ ಮುಂದೆ ರಂಗೋಲಿ ಇಡುವುದು ಸಂಪ್ರದಾಯ. ಹಾಗಾಗಿ ಜನರು ರೆಡಿಮೇಡ್ ರಂಗೋಲಿಗಳನ್ನು ಖರೀದಿ ಮಾಡಲು ಬಯಸ್ತಾರೆ. ಮುದ್ರಿತ ರಂಗೋಲಿ ಅಥವಾ ರಂಗೋಲಿಯ ಬಣ್ಣ ಬಣ್ಣದ ಹುಡಿಯನ್ನು ಮಾರಾಟ ಮಾಡಿಯೂ ನೀವು ಹಣ ಗಳಿಸಬಹುದು.