alex Certify GOOD NEWS: ವರ್ಷಪೂರ್ತಿ ಉಚಿತ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಕ್ಷಿಸಲು ಜಿಯೋನಲ್ಲಿದೆ ಅಗ್ಗದ ಪ್ಲಾನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ವರ್ಷಪೂರ್ತಿ ಉಚಿತ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಕ್ಷಿಸಲು ಜಿಯೋನಲ್ಲಿದೆ ಅಗ್ಗದ ಪ್ಲಾನ್‌

ಓಟಿಟಿ ಪ್ಲಾಟ್‌ಫಾರ್ಮ್‌ಗಳೆಲ್ಲ ಈಗ ದುಬಾರಿಯಾಗ್ತಿವೆ. ಸಬ್‌ಸ್ಕ್ರಿಪ್ಷನ್‌ ಇಲ್ಲದೆ ಟಿವಿ ಶೋಗಳು ಅಥವಾ ಸಿನೆಮಾ ನೋಡುವುದು ಅಸಾಧ್ಯ. ಆದ್ರೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಅನ್ನು ಉಚಿತವಾಗಿ ಆನಂದಿಸಲು ಅವಕಾಶವಿದೆ. ಇದಕ್ಕಾಗಿ ನಿಮ್ಮ ಸ್ನೇಹಿತರ OTT ಖಾತೆಯನ್ನು ಎರವಲು ಪಡೆಯುವ ಅಗತ್ಯವಿಲ್ಲ.

ನೆಟ್‌ಫ್ಲಿಕ್ಸ್‌ ಮತ್ತು ಅಮೇಜಾನ್‌ ಪ್ರೈಮ್‌ ಅನ್ನು ಫ್ರೀಯಾಗಿ ವೀಕ್ಷಿಸಲು ಅನುಕೂಲವಾಗುವಂತಹ ಪೋಸ್ಟ್‌ ಪೇಯ್ಡ್‌ ಪ್ಲಾನ್‌ ಒಂದು ಜಿಯೋನಲ್ಲಿದೆ. ಈ ಪ್ಲಾನ್‌ನಲ್ಲಿ OTT ಚಂದಾದಾರಿಕೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಪ್ಲಾನ್‌ ಆಕ್ಟಿವೇಟ್‌ ಮಾಡಿಕೊಂಡರೆ ನಿಮಗೆ ಇನ್ನಷ್ಟು ಪ್ರಯೋಜನಗಳು ಸಿಗುತ್ತವೆ.

ಜಿಯೋದ ಈ ಪ್ಲಾನ್‌ನ ಬೆಲೆ 399 ರೂಪಾಯಿ. ಇದರಲ್ಲಿ ನಿಮಗೆ ಪ್ರತಿ ತಿಂಗಳು 75 GB ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ನೀಡಲಾಗುತ್ತಿದೆ. ಈ ಯೋಜನೆಯು Netflix, Amazon Prime Video ಮತ್ತು Disney + Hotstar ಗೆ ಒಂದು ವರ್ಷದ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ.

ಇನ್ನು 599 ರೂಪಾಯಿ ಪ್ಲಾನ್‌ನಲ್ಲಿ 100 GB ಇಂಟರ್ನೆಟ್, 100 SMS ಮತ್ತು ಅನಿಯಮಿತ ಧ್ವನಿ ಕರೆಗಳು ಲಭ್ಯವಿರುತ್ತವೆ. ಇದರಲ್ಲೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಗ್ರಾಹಕರು ಕರೆ ಮತ್ತು ಇಂಟರ್ನೆಟ್‌ನ ಪ್ರಯೋಜನಗಳನ್ನು ಪಡೆಯುತ್ತಾರೆ. ಜೊತೆಗೆ ಮನರಂಜನೆಯೂ ಇರುವುದು ವಿಶೇಷ. ಹೆಚ್ಚಿನ ಜಿಯೋ ಬಳಕೆದಾರರಿಗೆ ಈ ಯೋಜನೆಗಳ ಬಗ್ಗೆ ತಿಳಿದಿಲ್ಲ. ಹಾಗಾಗಿ ಪ್ರತ್ಯೇಕವಾಗಿ ಹಣ ಪಾವತಿಸಿ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...