alex Certify ಕೇವಲ 60 ಸೆಕೆಂಡುಗಳಲ್ಲಿ 5 ಐಷಾರಾಮಿ ಕಾರುಗಳ ಕಳ್ಳತನ; ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 60 ಸೆಕೆಂಡುಗಳಲ್ಲಿ 5 ಐಷಾರಾಮಿ ಕಾರುಗಳ ಕಳ್ಳತನ; ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ

ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ಮರ್ಸಿಡಿಸ್ ಬೆಂಜ್, ಪೋರ್ಷೆ ಸೇರಿದಂತೆ 5 ಐಷಾರಾಮಿ ಕಾರುಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಈಗ ವೈರಲ್ ಆಗಿದೆ.

ನವೆಂಬರ್ 11ರಂದು 700,000 ಪೌಂಡ್ ಬೆಲೆ ಬಾಳುವ ಈ ಕಾರುಗಳನ್ನು ಎಸೆಕ್ಸ್ ಕೌಂಟಿಯ ಬುಲ್ಫಾನ್ ಗ್ರಾಮದ ಬ್ರೆಡ್ ವುಡ್ ರೋಡ್ ನಲ್ಲಿ ಕಳವು ಮಾಡಲಾಗಿದೆ. 5 ಕಾರುಗಳ ಪೈಕಿ ಕೇವಲ ಒಂದು ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ವಿಡಿಯೋದಲ್ಲಿ ಕಾಣಿಸುವಂತೆ ಕಳ್ಳನೊಬ್ಬ ಗೇಟ್ ತೆರೆದಿದ್ದು, ಐದು ಕಾರುಗಳಲ್ಲಿ ಮೊದಲೇ ಕುಳಿತಿದ್ದ ಇತರೆ ಕಳ್ಳರು ಅವುಗಳನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಇದೆಲ್ಲವೂ ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...