ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ 30-08-2021 6:55AM IST / No Comments / Posted In: Latest News, Live News, International ದೇಶದ 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಕೆನಡಾದಲ್ಲಿರುವ ಮಲೆಯಾಳಿ ಸಮುದಾಯ ಜನಪ್ರಿಯವಾದ ಕೇರಳ ದೋಣಿ ರೇಸ್ ಅನ್ನು ಮರುಸೃಷ್ಟಿಸಿದೆ. ಕೆನಡಾದ ಬ್ರಾಂಪ್ಟನ್‌ನ ಪ್ರೊಫೆಸರ್ಸ್ ಕೆರೆಯಲ್ಲಿ ಆಯೋಜಿಸಲಾದ ಈ ಸ್ಫರ್ಧೆಯಲ್ಲಿ ಒಟ್ಟಾರೆ 21 ತಂಡಗಳು ಭಾಗವಹಿಸಿದ್ದು, ಇವುಗಳ ಪೈಕಿ ಎರಡು ತಂಡಗಳು ಮಹಿಳೆಯರದ್ದೇ ಆಗಿವೆ. ರೇಸ್‌ನ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮುರಳೀಧರನ್, “ಕೇರಳ ದೋಣಿ ರೇಸ್ ಜಾಗತಿಕ ಮಟ್ಟ ತಲುಪಿದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ. ‘ಲೈಂಗಿಕ ಜೀವನʼ ಜೀವನವನ್ನು ಹಾಳು ಮಾಡುತ್ತೆ ಈ ಖಾಯಿಲೆ ಪ್ರತಿಯೊಂದು ದೋಣಿಯಲ್ಲೂ 11 ಸದಸ್ಯರಿದ್ದ ಈ ರೇಸ್ ಅನ್ನು ಟೊರೊಂಟೋದಲ್ಲಿರುವ ಭಾರತದ ರಾಯಭಾರ ಕಚೇರಿ ಹಾಗೂ ಬ್ರಾಂಪ್ಟನ್ ಮಲೆಯಾಳಿ ಸಮಾಜ ಆಯೋಜಿಸಿವೆ. Kerala Boat Race goes global! Traditional Kerala Boat Race recreated in Professor's Lake, Brampton, Canada by @indiaintoronto & Brampton Malayalee Samajam as part of #AzadiKaAmritMahotsav Watch the enthusiastic participation of 19 mens’ and 2 womens’ teams vying for the trophy. pic.twitter.com/bxrz1PmGUj — V. Muraleedharan (@MOS_MEA) August 29, 2021