ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದ್ದಾರೆ. ಭಾರತೀಯ ಗಾಲ್ಫ್ ಆಟಗಾರ್ತಿ, ಸತತ ಮೂರನೇ ದಿನವೂ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.
ಅಂತಿಮ ಮತ್ತು ನಾಲ್ಕನೇ ಸುತ್ತು ಶನಿವಾರ ನಡೆಯಲಿದೆ. ಆದರೆ ಕೆಟ್ಟ ಹವಾಮಾನದಿಂದಾಗಿ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ. ಒಂದು ವೇಳೆ ಕೊನೆ ಸುತ್ತು ನಡೆಯದೆ ಹೋದಲ್ಲಿ ಮೂರನೇ ಸುತ್ತಿನವರೆಗಿನ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಹಾಗಾದಲ್ಲಿ ಅದಿತಿ ಅಶೋಕ್ ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆಯಿದೆ.
ಅಂತಿಮ ಸುತ್ತು ನಡೆದು, ಅದಿತಿ ಉತ್ತಮ ಪ್ರದರ್ಶನ ನೀಡಿದ್ರೆ ಚಿನ್ನದ ಪದಕ ಸಿಗುವ ನಿರೀಕ್ಷೆಯಿದೆ. ಭಾರತದ ಇನ್ನೊಬ್ಬ ಆಟಗಾರ್ತಿ ದೀಕ್ಷಾ ದಾಗರ್, 51 ನೇ ಸ್ಥಾನದಲ್ಲಿದ್ದಾರೆ. ಅವರು ಮೂರನೇ ಸುತ್ತಿನಲ್ಲಿ 72 ಕ್ಕಿಂತ ಹೆಚ್ಚು ಕಾರ್ಡ್ ಆಡಿದರು. ಅಮೆರಿಕದ ನೆಲ್ಲಿ ಕೊರ್ಡಾ ಅಗ್ರಸ್ಥಾನದಲ್ಲಿದ್ದಾರೆ. ಅದಿತಿಗೆ ಚಿನ್ನ ಗೆಲ್ಲುವ ಅವಕಾಶವಿದೆ.
PF ಬಡ್ಡಿ ದರದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಇಪಿಎಫ್ಒ
ಒಲಿಂಪಿಕ್ಸ್ ನಲ್ಲಿ ಗಾಲ್ಫ್ ಆಡುತ್ತಿರುವುದು ಇದು ನಾಲ್ಕನೇ ಬಾರಿ. ಅದಿತಿ ಪದಕ ಗೆದ್ದರೆ, ಇದು ಗಾಲ್ಫ್ ನಲ್ಲಿ ಭಾರತದ ಮೊದಲ ಪದಕವಾಗಲಿದೆ. ಭಾರತ ಇದುವರೆಗೆ ಅಥ್ಲೆಟಿಕ್ಸ್, ಕುಸ್ತಿ, ಟೆನಿಸ್, ವೇಟ್ ಲಿಫ್ಟಿಂಗ್, ಶೂಟಿಂಗ್, ಬಾಕ್ಸಿಂಗ್ ಮತ್ತು ಬ್ಯಾಡ್ಮಿಂಟನ್ ನಲ್ಲಿ ಮಾತ್ರ ಪದಕಗಳನ್ನು ಗೆದ್ದಿದೆ.