ಗೋಲ್ಡ್ಮನ್ ಸ್ಯಾಚ್ಸ್ ಕಂಪನಿಯು 2023ರ ವೇಳೆಗೆ 2000 ಹೊಸ ಉದ್ಯೋಗಿಗಳನ್ನ ನೇಮಿಸಿಕೊಳ್ಳೋದಾಗಿ ಹೇಳಿದೆ. ಭಾರತದಲ್ಲಿ ತನ್ನ ಜಾಗತಿಕ ಕೇಂದ್ರವನ್ನ ವಿಸ್ತರಿಸುವ ಸಲುವಾಗಿ ಈ ಕಂಪನಿಯು ಹೈದರಾಬಾದ್ನಲ್ಲಿ ಹೊಸ ಕಚೇರಿಯನ್ನ ತೆರೆಯುತ್ತಿರೋದಾಗಿ ಘೋಷಣೆ ಮಾಡಿದೆ.
ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳನ್ನ ಗಮನದಲ್ಲಿರಿಸಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕಂಪನಿ ತೆರೆಯುವ ಕಾರ್ಯ ಆರಂಭವಾಗಿದೆ. ಪ್ರಸ್ತುತ 250 ಉದ್ಯೋಗಿಗಳನ್ನ ಈ ಕಂಪನಿಯು ಹೊಂದಿದೆ. 2021ರ ಅಂತ್ಯದಲ್ಲಿ 800 ಉದ್ಯೋಗಿಗಳಿಗೆ ಕೆಲಸ ನೀಡಲಿದ್ದೇವೆ. 2023ರ ವೇಳೆಗೆ 2500ರಷ್ಟು ಉದ್ಯೋಗಾವಕಾಶವನ್ನ ಕಲ್ಪಿಸಲಿದ್ದೇವೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಹೇಳಿದೆ.
ನೂತನ ಕಚೇರಿಯನ್ನು ತೆಲಂಗಾಣ ಐಟಿ ಹಾಗೂ ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಉದ್ಘಾಟನೆ ಮಾಡಿದ್ರು. ಚೇರ್ಮನ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಡೇವಿಡ್ ಎಂ ಸೊಲೋಮೊನ್ ಕೂಡ ಈ ವಿಚಾರವಾಗಿ ಮಾತನಾಡಿ ಈ ನೂತನ ಕಚೇರಿಯ ಮೂಲಕ ಜಾಗತಿಕವಾಗಿ ಇನ್ನಷ್ಟು ಹೆಚ್ಚಿನ ಖ್ಯಾತಿ ಸಂಪಾದಿಸಲಿದ್ದೇವೆ ಎಂಬ ನಂಬಿಕೆಯಿದೆ ಎಂದು ಹೇಳಿದ್ರು.