ನಿನ್ನೆವರೆಗೂ ದೇಶದ ನಕ್ಷೆಯಲ್ಲಿ ಇದೆ ಎಂದೇ ಗೊತ್ತಿಲ್ಲದ ಹರಿಯಾಣಾದ ಪಾಣಿಪತ್ ಜಿಲ್ಲೆಯ ಖಾಂಡ್ರಾ ಗ್ರಾಮದ ಹೆಸರೀಗ ಎಲ್ಲೆಡೆ ಸುದ್ದಿಯಲ್ಲಿದೆ. ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾರ ತವರೂರು ಖಾಂಡ್ರಾ ಈಗ ಸಂಭ್ರಮದ ಹೊಳೆಯಲ್ಲಿ ಮುಳುಗಿದೆ.
ಒಲಿಂಪಿಕ್ಸ್‌ನ ಫೀಲ್ಡ್ ಮತ್ತು ಟ್ರಾಕ್ ಶಿಸ್ತಿನಲ್ಲಿ ಚಿನ್ನದ ಪದಕ ಗೆದ್ದ ದೇಶದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುಬೇದಾರ್ ನೀರಜ್ ಚೋಪ್ರಾ ಚಿನ್ನ ಗೆದ್ದ ಸುದ್ದಿ ಕೇಳುತ್ತಲೇ ಅವರ ಮನೆಯ ಸುತ್ತಲೂ ಗ್ರಾಮಸ್ಥರು ನೆರೆದು ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಸಂಭ್ರಮಿಸಿದ್ದಾರೆ.
ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ..! ನಿಮ್ಮ ಮೊಬೈಲ್ನ ಸಂಪೂರ್ಣ ಮಾಹಿತಿ ಕದಿಯುತ್ತೆ ಈ ಅಪ್ಲಿಕೇಶನ್..!
“ನನ್ನ ಮಗ ದೇಶಕ್ಕೆ ಕೀರ್ತಿ ತಂದ ಎಂದು ಕೇಳಿ ಹೆಮ್ಮೆ ಎನಿಸುತ್ತಿದೆ. ಆತ ದೇಶಕ್ಕಾಗಿ ಚಿನ್ನದ ಪದಕ ತಂದೇ ತರುತ್ತಾನೆ ಎಂದು ನಮಗೆ ಮೊದಲಿನಿಂದಲೂ ವಿಶ್ವಾಸವಿತ್ತು” ಎಂದು ನೀರಜ್ ತಂದೆ ಸತೀಶ್ ಕುಮಾರ್ ತಿಳಿಸಿದ್ದಾರೆ. ನೀರಜ್ ತನ್ನೂರಿಗೆ ಬರುತ್ತಲೇ ಭರ್ಜರಿ ಸ್ವಾಗತ ನೀಡಲು ಊರಿನ ಗ್ರಾಮಸ್ಥರೆಲ್ಲಾ ಪ್ಲಾನ್ ಮಾಡುತ್ತಿದ್ದಾರೆ.