alex Certify ನೀರಜ್ ಚೋಪ್ರಾ ಅವರ ‘ಜಾವೆಲಿನ್’ ಖರೀದಿಸಿದವರ್ಯಾರು ಎಂಬ ಸಂಗತಿ ಈಗ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಜ್ ಚೋಪ್ರಾ ಅವರ ‘ಜಾವೆಲಿನ್’ ಖರೀದಿಸಿದವರ್ಯಾರು ಎಂಬ ಸಂಗತಿ ಈಗ ಬಹಿರಂಗ

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ ಒಂದನ್ನು ಕಳೆದ ವರ್ಷ ನಡೆದ ಹರಾಜಿನಲ್ಲಿ 1.5 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಸಂಗ್ರಹಿಸಿದ್ದ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ವೇಳೆ ಈ ಮೊತ್ತಕ್ಕೆ ಜಾವೆಲಿನ್ ಬಿಕರಿಯಾಗಿತ್ತು.

ನರೇಂದ್ರ ಮೋದಿಯವರನ್ನು ನೀರಜ್ ಚೋಪ್ರಾ ಭೇಟಿಯಾದ ವೇಳೆ ಈ ಜಾವೆಲಿನ್ ನೀಡಿದ್ದರು. ಸಾಮಾಜಿಕ ಉದ್ದೇಶಗಳಿಗಾಗಿ ಸ್ಮರಣಿಕೆಗಳನ್ನು ಹರಾಜು ಹಾಕಿದಾಗ ಇದನ್ನು ಖರೀದಿಸಿದವರು ಯಾರು ಎಂಬ ಸಂಗತಿ ಈವರೆಗೆ ಬಹಿರಂಗವಾಗಿರಲಿಲ್ಲ.

ಇದೀಗ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 1.5 ಕೋಟಿ ರೂಪಾಯಿ ನೀಡಿ ನೀರಜ್ ಚೋಪ್ರಾ ಅವರ ಜಾವೆಲಿನ್ ಖರೀದಿಸಿದ್ದು ಬಿಸಿಸಿಐ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...