alex Certify ಸುತ್ತಿಗೆಯೊಳಗೆ ಅಡಗಿಸಿಟ್ಟಿದ್ದ ಚಿನ್ನ ಪತ್ತೆ ಮಾಡಿದ ಕಸ್ಟಮ್ಸ್​ ಅಧಿಕಾರಿಗಳು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುತ್ತಿಗೆಯೊಳಗೆ ಅಡಗಿಸಿಟ್ಟಿದ್ದ ಚಿನ್ನ ಪತ್ತೆ ಮಾಡಿದ ಕಸ್ಟಮ್ಸ್​ ಅಧಿಕಾರಿಗಳು……!

ಪ್ರತ್ಯೇಕ ಪ್ರಕರಣಗಳಲ್ಲಿ ಚೆನ್ನೈನ ಏರ್​ ಕಸ್ಟಮ್ಸ್​ ಅಧಿಕಾರಿಗಳು ಬರೋಬ್ಬರಿ 1.588 ಕೆಜಿ ತೂಕದ ಅಂದ್ರೆ 66.34 ಲಕ್ಷ ರೂಪಾಯಿ ಬೆಲೆ ಬಾಳುವ ಅಕ್ರಮ ಚಿನ್ನವನ್ನು ಇಬ್ಬರು ಪ್ರಯಾಣಿಕರಿಂದ ವಶಕ್ಕೆ ಪಡೆದಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರದಿಂದ ಚೆನ್ನೈಗೆ ಹಿಂದಿರುಗಿದ ಪ್ರಯಾಣಿಕರು ತಮ್ಮ ಬ್ಯಾಗುಗಳಲ್ಲಿ ಚಿನ್ನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಪ್ರಯಾಣಿಕರ ಬ್ಯಾಗ್​ನಲ್ಲಿದ್ದ ಕಬ್ಬಿಣದ ಸುತ್ತಿಗೆಯ ಒಳಗೆ ಚಿನ್ನವನ್ನು ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ಇದರಲ್ಲಿ 14.25 ಲಕ್ಷ ರೂಪಾಯಿ ಮೌಲ್ಯದ 341 ಗ್ರಾಂ 24 ಕ್ಯಾರಟ್​ ಚಿನ್ನ ಪತ್ತೆಯಾಗಿದೆ. ಈ ಚಿನ್ನವನ್ನು ಕಸ್ಟಮ್ಸ್​ ಕಾಯ್ದೆಯ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕುವೈತ್​ನಿಂದ ಬಂದ ಪ್ರಯಾಣಿಕರನು ಕನ್ನಡಿಯ ಫ್ರೆಮ್​ನ ಹಿಂಬದಿಯಲ್ಲಿ ಚಿನ್ನವನ್ನು ಅಡಿಗಿಸಿಟ್ಟಿದ್ದ ಎಂದು ತಿಳಿದುಬಂದಿದೆ. ಈ ಪ್ರಯಾಣಿಕನಿಂದ 52.09 ಲಕ್ಷ ರೂಪಾಯಿ ಮೌಲ್ಯದ 1.247 ಕೆಜಿ ತೂಕದ 24 ಕ್ಯಾರಟ್ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಸಹ ಕಸ್ಟಮ್ಸ್​ ಕಾಯ್ದೆಯ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...