ಕಳೆದ ಎರಡು ದಿನಗಳಿಂದ ದೇಶದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ದರ ಇಂದು ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಎಂಸಿಎಕ್ಸ್ನಲ್ಲಿ ಚಿನ್ನದ ದರ 0.08 ಪ್ರತಿಶತ ಏರಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 49,166 ರೂಪಾಯಿ ಆಗಿದೆ.
ಬೆಳ್ಳಿ ದರ ಕೂಡ 0.21 ಪ್ರತಿಶತ ಏರಿಕೆಯಾಗಿದ್ದು ಒಂದು ಕೆಜಿ ಬೆಳ್ಳಿಯ ದರ 71,382 ರೂಪಾಯಿ ಆಗಿದೆ. ಕಳೆದ ಎರಡು ದಿನಗಳಿಂದ ಚಿನ್ನದಂತೆ ಬೆಳ್ಳಿಯ ದರ ಕೂಡ ಇಳಿಕೆಯಾಗಿತ್ತು.
ಯುಎಸ್ ಬಾಂಡ್ ಇಳುವರಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಯುಎಸ್ ಹಣದುಬ್ಬರದ ದತ್ತಾಂಶ ಹಾಗೂ ಈ ವಾರ ನಡೆಯಲಿರುವ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ನೀತಿಯ ಸಭೆಯಿಂದಾಗಿ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಹಳದಿ ಲೋಹ ಮತ್ತೆ ತನ್ನ ದರದಲ್ಲಿ ಏರಿಕೆಯನ್ನ ತೋರಿಸಿದೆ.