ಕೇಂದ್ರ ಹಾಗೂ ರಾಜ್ಯ ಸೆರ್ಕಾರಗಳ ವಿವಿಧ ಸುಂಕಗಳಿಂದ ಇಂಧನ ಬೆಲೆ ಹೆಚ್ಚಿದ್ದು, ಆ ಕಾರಣದಿಂದ ದಿನಸಿ ವಸ್ತುಗಳೂ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಚಿನ್ನಾಭರಣಗಳ ಬೆಲೆಗಳೂ ಸಹ ಅದೇ ಹಾದಿ ಹಿಡಿಯುತ್ತಿರುವುದು ನಿರೀಕ್ಷಿತವೇ ಆಗಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಂಡಿದ್ದು, ನವೆಂಬರ್ 18ರ ಟ್ರೆಂಡ್ ಪ್ರಕಾರ ಸತತ ಎರಡನೇ ದಿನ ಬೆಲೆಯಲ್ಲಿ ಹೆಚ್ಚಳ ಕಂಡಿದೆ.
ಅಧ್ಯಯನದಲ್ಲಿ ಗೊತ್ತಾಯ್ತು ವ್ಯಾಯಾಮದ ವರದಾನ: ಕಾಯಿಲೆಗಳಿಗೆ ನಮ್ಮಲ್ಲೇ ಚಿಕಿತ್ಸೆ
ಗುರುವಾರ ಬೆಳಿಗ್ಗೆ 9:45ರ ವೇಳೆಗೆ ಚಿನ್ನದ ಬೆಲೆಯು 10 ಗ್ರಾಂಗೆ 49,109 ರೂ.ಗಳಷ್ಟಿತ್ತು, ಇದೇ ವೇಳೆ ಬೆಳ್ಳಿಯ ಬೆಲೆಯು 66,419 ರೂಪಾಯಿಗಳಿಗೆ ಏರಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದಲ್ಲಿ ಅಲ್ಪ ಕುಸಿತ ಹಾಗೂ ಅಮೆರಿಕನ್ ಬಾಂಡ್‌ಗಳು ಮೂರು ವಾರಗಳ ಸತತ ಏರುಗತಿಯಿಂದ ಕೊಂಚ ಮಟ್ಟಿಗೆ ಹಿಂದೆ ಸರಿದ ಪರಿಣಾಮ ಆಭರಣ ಮಾರುಕಟ್ಟೆ ಮೇಲೆ ಆಗಿದೆ. ಸಾಮಾನ್ಯವಾಗಿ ಡಾಲರ್ ಹಾಗೂ ಚಿನ್ನದ ಮೌಲ್ಯಗಳು ಪರಸ್ಪರ ವಿರುದ್ಧ ದಿಕ್ಕಿನ ಟ್ರೆಂಡ್‌ನಲ್ಲಿ ಸಾಗುತ್ತವೆ.