alex Certify ನೆಟ್ಟಿಗರ ಕುತೂಹಲಕ್ಕೆ ಕಾರಣವಾದ ನಿಗೂಢ ದ್ವೀಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಕುತೂಹಲಕ್ಕೆ ಕಾರಣವಾದ ನಿಗೂಢ ದ್ವೀಪ

ಅತಿ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್ ಟೈಂ ಸಂಚಾರ ದಟ್ಟಣೆ, ಎರಡು ಊರುಗಳ ನಡುವಿನ ದೂರ ಸೇರಿದಂತೆ ನಿಮ್ಮ ಲೈವ್‌ ಲೊಕೇಷನ್‌ ಎಲ್ಲಾ ತಿಳಿದುಕೊಳ್ಳುವ ಅದ್ಭುತ ವ್ಯವಸ್ಥೆಗಳಿವೆ.

ಆದರೆ ಕೆಲವೊಮ್ಮೆ ಈ ಅಪ್ಲಿಕೇಶನ್‌ ಸೆರೆಹಿಡಿದು ಹಂಚಿಕೊಳ್ಳುವ ಕೆಲವೊಂದು ಚಿತ್ರಗಳು ನಂಬಲು ಕಷ್ಟವಾಗುತ್ತವೆ. ವಿಶ್ಲೇಷಣೆಗೆ ನಿಲುಕದ ಕೆಲವೊಂದು ಅನಾಮಿಕ ವಸ್ತುಗಳನ್ನು ಸೆರೆ ಹಿಡಿಯುವ ಗೂಗಲ್ ಮ್ಯಾಪ್ಸ್‌ ನೆಟ್ಟಿಗರನ್ನು ತಲೆಕೆಡಿಸಿಕೊಂಡು ಚಿಂತಿಸುವಂತೆ ಮಾಡುತ್ತದೆ.

ದೋಣಿ ಮೇಲೆ ಎರಡಂತಸ್ತಿನ ಮನೆ ಸ್ಥಳಾಂತರಿಸಿದ ಜೋಡಿ

ನಿಗೂಢ ದ್ವೀಪವೊಂದರ ಚಿತ್ರಗಳು ರೆಡ್ಡಿಟ್‌ನಲ್ಲಿ ಶೇರ್‌ ಆಗಿದ್ದು, ಸದ್ದು ಮಾಡುತ್ತಿವೆ. ಗಿಟಾರ್‌ ಪಿಕ್‌ ಆಕಾರದಲ್ಲಿರುವ ಈ ದ್ವೀಪವನ್ನು ರೆಡ್ಡಿಟ್ ಬಳಕೆದಾರರೊಬ್ಬರು ನೆಟ್ಟಿಗರ ಗಮನಕ್ಕೆ ತಂದಿದ್ದಾರೆ.

ಈ ಜಾಗದ ಬಗ್ಗೆ ಅನೇಕ ಥಿಯರಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಏರಿಯಾ 51ರಂತೆ ಅಮೆರಿಕದಿಂದ ರಹಸ್ಯವಾಗಿ ಇಡಲ್ಪಟ್ಟ ಜಾಗ ಇದಾಗಿರಬಹುದೆಂದು ಕೆಲ ನೆಟ್ಟಿಗರು ತಮ್ಮ ವಾದ ಮುಂದಿಟ್ಟಿದ್ದಾರೆ.

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ

ಈ ಭೂಮಿಯ ಸುತ್ತಲೂ ನೀಲಿ ಬಣ್ಣ ಕಾಣುತ್ತಿದ್ದು, ಸಾಗರದಿಂದ ಆವೃತವಾದಂತೆ ಭಾಸವಾಗುತ್ತದೆ. ಕಂದು ಬಣ್ಣದ ಎರಡು ಹಾಗೂ ಬಿಳಿ ಬಣ್ಣದ ಒಂದು ಪದರ ಇದರ ಮಧ್ಯದಲ್ಲಿ ಇದೆ. ದ್ವೀಪದ ಒಳಗೆ ಸಂಪೂರ್ಣ ಕಪ್ಪಾಗಿದೆ ಅಥವಾ ಗೂಗಲ್ ಮ್ಯಾಪ್ಸ್ ಇದನ್ನು ಬ್ಲಾಕ್ ಔಟ್ ಮಾಡಿರುವ ಸಾಧ್ಯತೆ ಇದೆ.

ಭಾರೀ ಭದ್ರತೆ ಇರುವ ಪ್ರದೇಶಗಳನ್ನು ಬ್ಲಾಕ್ ಔಟ್ ಮಾಡುವುದು ಗೂಗಲ್‌ಗೆ ಹೊಸ ವಿಚಾರವೇನಲ್ಲ. ಜಗತ್ತಿನಾದ್ಯಂತ ಅನೇಕ ಕಾರಾಗೃಹಗಳು, ಮಿಲಿಟರಿ ಸವಲತ್ತುಗಳಿಗೆ ಹೀಗೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...