alex Certify ಕ್ರಿಕೆಟ್​ ಜೀವನಕ್ಕೆ ಕಮ್​ಬ್ಯಾಕ್​ ಮಾಡೋದ್ರ ಬಗ್ಗೆ ಸುಳಿವು ನೀಡಿದ ಯುವರಾಜ್​ ಸಿಂಗ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್​ ಜೀವನಕ್ಕೆ ಕಮ್​ಬ್ಯಾಕ್​ ಮಾಡೋದ್ರ ಬಗ್ಗೆ ಸುಳಿವು ನೀಡಿದ ಯುವರಾಜ್​ ಸಿಂಗ್​….!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​​ ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​ ನೀಡಿದ್ದಾರೆ. 2022ರ ಫೆಬ್ರವರಿ ತಾವು ಪಿಚ್​​ಗೆ ಮರಳುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಒಂದು ಕಾಲದಲ್ಲಿ ಟೀಂ ಇಂಡಿಯಾ ಪಾಲಿಗೆ ಟ್ರಬಲ್​ ಶೂಟರ್​ ಆಗಿದ್ದ ಯುವಿ ಅದೆಷ್ಟೋ ಪಂದ್ಯಗಳಲ್ಲಿ ತಂಡದ ಗೆಲುವಿನ ಹಿಂದೆ ಬೆನ್ನೆಲುಬಾಗಿ ನಿಂತಿದ್ದರು. 2011ರ ವಿಶ್ವಕಪ್​ನಲ್ಲಿ ಮ್ಯಾನ್​​ ಆಫ್​ ಟೂರ್ನ್​ಮೆಂಟ್​ ಪ್ರಶಸ್ತಿಯನ್ನೂ ಬಾಚಿಕೊಂಡ ಕೀರ್ತಿ ಇವರದು.

ಕ್ಯಾನ್ಸರ್​ ಕಾಯಿಲೆಗೆ ತುತ್ತಾಗಿದ್ದ ಯುವರಾಜ್​ ಸಿಂಗ್​​ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಿ ಟೀಂ ಇಂಡಿಯಾಗೆ ಕಂ ಬ್ಯಾಕ್​ ಮಾಡಿದ್ದರು. 40 ಟೆಸ್ಟ್​, 304 ಏಕದಿನ ಪಂದ್ಯ ಹಾಗೂ 58 ಟಿ20 ಪಂದ್ಯಗಳಿಂದ ಯುವರಾಜ್​ ಸಿಂಗ್​​ 11,000 ರನ್​, 17 ಶತಕ ಹಾಗೂ 71 ಅರ್ಧ ಶತಕವನ್ನು ಸಂಪಾದಿಸಿದ್ದಾರೆ.
2000ನೇ ಇಸ್ವಿಯಲ್ಲಿ ಐಸಿಸಿ ನಾಕ್​ಔಟ್​​​ ಟ್ರೋಫಿ ಮೂಲಕ ಟೀಂ ಇಂಡಿಯಾಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್​ ಸಿಂಗ್​ ಕೊನೆಯದಾಗಿ 2017ರ ಜೂನ್​ 30ರಂದು ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ಈ ಎಡಗೈ ಬ್ಯಾಟ್ಸ್​ಮನ್​ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್​ ಮಾಡಿರುವ ಯುವಿ ಇದಕ್ಕೆ, ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ. ಸಾರ್ವಜನಿಕರ ಒತ್ತಾಯದ ಮೇರೆಗೆ ನಾನು ಬಹುಶಃ ಫೆಬ್ರವರಿಯಲ್ಲಿ ಪಿಚ್​ಗೆ ಮರಳಲಿದ್ದೇನೆ..! ನಿಮ್ಮೆಲ್ಲರ ಪ್ರೀತಿ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು. ಕಷ್ಟದ ಸಂದರ್ಭದಲ್ಲಿ ನಿಜವಾದ ಅಭಿಮಾನಿ ತನ್ನ ತಂಡಕ್ಕೆ ಬೆಂಬಲ ಸೂಚಿಸುತ್ತಾನೆ. ಹೀಗಾಗಿ ನಿಮ್ಮ ಬೆಂಬಲವನ್ನು ಹೀಗೆ ಮುಂದುವರಿಸಿ ಎಂದು ಶೀರ್ಷಿಕೆ ನೀಡಿದ್ದಾರೆ.

https://www.instagram.com/tv/CVv7NX3DKjg/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...