ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ನೀಡಿದ್ದಾರೆ. 2022ರ ಫೆಬ್ರವರಿ ತಾವು ಪಿಚ್ಗೆ ಮರಳುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಒಂದು ಕಾಲದಲ್ಲಿ ಟೀಂ ಇಂಡಿಯಾ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದ ಯುವಿ ಅದೆಷ್ಟೋ ಪಂದ್ಯಗಳಲ್ಲಿ ತಂಡದ ಗೆಲುವಿನ ಹಿಂದೆ ಬೆನ್ನೆಲುಬಾಗಿ ನಿಂತಿದ್ದರು. 2011ರ ವಿಶ್ವಕಪ್ನಲ್ಲಿ ಮ್ಯಾನ್ ಆಫ್ ಟೂರ್ನ್ಮೆಂಟ್ ಪ್ರಶಸ್ತಿಯನ್ನೂ ಬಾಚಿಕೊಂಡ ಕೀರ್ತಿ ಇವರದು.
ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಯುವರಾಜ್ ಸಿಂಗ್ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಿ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಿದ್ದರು. 40 ಟೆಸ್ಟ್, 304 ಏಕದಿನ ಪಂದ್ಯ ಹಾಗೂ 58 ಟಿ20 ಪಂದ್ಯಗಳಿಂದ ಯುವರಾಜ್ ಸಿಂಗ್ 11,000 ರನ್, 17 ಶತಕ ಹಾಗೂ 71 ಅರ್ಧ ಶತಕವನ್ನು ಸಂಪಾದಿಸಿದ್ದಾರೆ.
2000ನೇ ಇಸ್ವಿಯಲ್ಲಿ ಐಸಿಸಿ ನಾಕ್ಔಟ್ ಟ್ರೋಫಿ ಮೂಲಕ ಟೀಂ ಇಂಡಿಯಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಕೊನೆಯದಾಗಿ 2017ರ ಜೂನ್ 30ರಂದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ಈ ಎಡಗೈ ಬ್ಯಾಟ್ಸ್ಮನ್ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ಯುವಿ ಇದಕ್ಕೆ, ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ. ಸಾರ್ವಜನಿಕರ ಒತ್ತಾಯದ ಮೇರೆಗೆ ನಾನು ಬಹುಶಃ ಫೆಬ್ರವರಿಯಲ್ಲಿ ಪಿಚ್ಗೆ ಮರಳಲಿದ್ದೇನೆ..! ನಿಮ್ಮೆಲ್ಲರ ಪ್ರೀತಿ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು. ಕಷ್ಟದ ಸಂದರ್ಭದಲ್ಲಿ ನಿಜವಾದ ಅಭಿಮಾನಿ ತನ್ನ ತಂಡಕ್ಕೆ ಬೆಂಬಲ ಸೂಚಿಸುತ್ತಾನೆ. ಹೀಗಾಗಿ ನಿಮ್ಮ ಬೆಂಬಲವನ್ನು ಹೀಗೆ ಮುಂದುವರಿಸಿ ಎಂದು ಶೀರ್ಷಿಕೆ ನೀಡಿದ್ದಾರೆ.
https://www.instagram.com/tv/CVv7NX3DKjg/?utm_source=ig_web_copy_link